ಅರಕೇರಾ : ಹೆಚ್ .ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಗ್ರಾಮಗಳನ್ನು ನೂತನ ತಾಲೂಕು ಕೇಂದ್ರವಾಗಿರುವ ಅರಕೇರಾಕ್ಕೆ ತಾಲೂಕಿಗೆ ಸೇರಿಸಲಾಗಿತ್ತು. ಆ ಗ್ರಾಮಗಳಲ್ಲಿ ಮರಳಿ ದೇವದುರ್ಗ ತಾಲೂಕಿಗೆ ಸೇರ್ಪಡೆಮಾಡಲು ಆಕ್ಷೇಪಣೆಗಳು ಸಲ್ಲಿಸಲು ಡಿ.3೦ ರವರಗೆ ಕಾಲಾವಾಕಾಶ ಕಲ್ಪಿಸಲಾಗಿದೆ.ಎಂದು ಅರಕೇರಾ ತಹಶೀಲ್ದಾರ ಅಮರೇಶ ಬಿರಾದಾರ ತಿಳಿಸಿದ್ದಾರೆ.
ಈಗಾಗಲೇ ರಾಯಚೂರು ಜಿಲ್ಲಾಧಿಕಾರಿಗಳು, ರಾಜ್ಯ ಸರಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಅವರು ಪತ್ರ ಬರೆದು ತಿಳಿಸಿದ್ದಾರೆ, ಅರಕೇರಾ ತಾಲ್ಲೂಕಿನ ಹೆಚ್.ಸಿದ್ದಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ೬ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸಿ. ದಿನಾಂಕ 01-12-2025 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು.ಆಧಿಸೂಚನೆಯನ್ನು ರಾಜ್ಯ ಪತ್ರದಲ್ಲಿ ಪ್ರಟಿಸಲಾಗಿದೆ.
ಅಧಿಸೂಚನೆಯಲ್ಲಿ ತಿಳಿಸಿರುವಂತೆ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ 3೦ ದಿನಗಳ ಒಳಗಾಗಿ ಸ್ವೀಕೃತವಾಗುವ ಆಕ್ಷೇಪಣೆ ಸಲಹೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆಯನ್ನು.ಹೊರಡಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಈಹಿನ್ನೆಯಲ್ಲಿ ಅಧಿಸೂಚನೆಯನ್ನು ಪ್ರಚಾರ ಪಡಿಸಿ ನಿಗದಿತ ಅವಧಿಯಲ್ಲಿ ಸ್ವೀಕೃತವಾಗುವ ಎಲ್ಲಾ ಆಕ್ಷೇಪಣೆ ಸಲಹೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಹಶೀಲ್ದಾರ ಅಮರೇಶ ಬಿರಾದಾರ ಅರಕೇರಾ

