ಮಾನ್ವಿ :ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದ ಶ್ರೀಮಠದ ಧ್ಯಾನ ಮಂದಿರದಲ್ಲಿ ಈ ದಿನ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಕರ್ನಾಟಕ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಲ ತುಂಗಭದ್ರ ಅಭಿಯಾನ ಮೂರನೇ ಹಂತದ ಜಲ ಜಾಗೃತಿ ಜನ ಜಾಗೃತಿ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಹಂಪಯ್ಯ ನಾಯಕ್ ಇವರು.
ಈ ಸಭೆಯಲ್ಲಿ ಮಾತನಾಡಿದ ಮಾನ್ಯ ಶಾಸಕರು ನಮ್ಮ ಮುಂದಿನ ಪೀಳಿಗೆಗೆ ಪರಿಶುದ್ಧವಾದ ವಾತಾವರಣ ಹಾಗೂ ನೀರನ್ನು ನಮ್ಮ ಭಾಗಕ್ಕೆ ಬರಲು ಈಗಿನಿಂದಲೇ ಈ ಸಮಿತಿಯು ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ ತುಂಗಭದ್ರ ದಡದಲ್ಲಿ ಬರುವ ಹಳ್ಳಿಗಳಲ್ಲಿ ಇದರ ಬಗ್ಗೆ ಒಂದು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮತ್ತು ಈ ಒಂದು ಅಭಿಯಾನದಲ್ಲಿ ತನು ಮನ ಧನದಿಂದ ಪ್ರತಿಯೊಬ್ಬರೂ ಭಾಗವಹಿಸಿದಾಗ ಮಾತ್ರ ಈ ಒಂದು ಅಭಿಯಾನ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಮಿತಿಗೆ ನನ್ನಿಂದ ಆಗುವ ಎಲ್ಲಾ ಸಹಾಯವನ್ನು ಮಾಡಲು ಸಹಾಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ ವಕೀಲರು,ಸಮಿತಿಯ ಸಂಚಾಲಕರು ಎನ್ ಉದಯ್ ಕುಮಾರ್ ಸಾಹುಕಾರ್,ಸಿರವಾರ್, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ್ ನಾಯಕ್, ಈ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ವೀರಾಪುರ್, ಸಂಚಾಲಕರಾದ ಅನಿತಾ ಮಂತ್ರಿ, ಅರುಣ್ ಚಂದ ಶೆಟ್ಟಿ,ಮಲ್ಲಯ್ಯ ಗೌಡ ಗಣೆಕಲ್, ಕೃಪಾ ಸಾಗರ್ ಪಾಟೀಲ, ಸುಧಾಕರ್, ಮಂಜುನಾಥ್ ನಾಯಕ್ ಜಾನೇಕಲ್, ಸುಂಕನೂರು ಶಿವಪ್ಪ ನಾಯಕ್ ವಕೀಲರು, ಡಾಕ್ಟರ್ ಬೊಮ್ಮನಾಳ, ಸತ್ತಾರ್ ಬಂಗ್ಲೆವಲೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *