ಕಾರಟಗಿ : ಕಾರಟಗಿ, ತಾಲೂಕಿನ ಮೈಲಾಪುರ್ ಗ್ರಾಮದಲ್ಲಿ ಬಹಳ ವರ್ಷಗಳ ಇತಿಹಾಸ ಹೊಂದಿರುವ ಅಂಚೆ ಇಲಾಖೆ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡ ಸಾಧನೆ ಮಾಡುತ್ತಿರುವುದು ಸ್ಥಾಪನೆಯ ಎಂದು ಅಂಚೆ ಸಹಾಯಕರು ವೆಂಕಟೇಶ್ವರ ರವರು ತಿಳಿಸಿದರು ಮೈಲಾಪುರ ಗ್ರಾಮದ ಅಂಚೆ ಕಚೇರಿಯಲ್ಲಿ ಶನಿವಾರ ಆಯೋಜಿಸಿದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ಅಂಚೆ ಇಲಾಖೆಯ ಮಾರುಕಟ್ಟೆ ನಿರ್ವಾಹಕರಾದ ಮಲ್ಲಿಕಾರ್ಜುನನವರು ಜನರಲ್ಲಿ ಹಣಕಾಸು ಭದ್ರತೆ ಮತ್ತು ಭವಿಷ್ಯ ಯೋಜನೆಯ ಅರಿವು ಮೂಡಿಸುವ ಉದ್ದೇಶದಿಂದ ಅಂಚೆ ಇಲಾಖೆಯ ಉಳಿತಾಯ ಹಾಗೂ ವಿಮಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು .ಇಂದು ಡಿಜಿಟಲ್ ಯುಗದಲ್ಲಿಯೂ ಸಹ ಅಂಚೆ ಇಲಾಖೆ ವಿಶ್ವಾಸಾರ್ಹ ಸೇವೆಗಳ ಮೂಲಕ ಜನರ ಬದುಕಿಗೆ ಸಂಪರ್ಕ ಕಲ್ಪಿಸುತ್ತಾ ಆರ್ಥಿಕ ಸಾಮಾಜಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಗ್ಗೆ ಗುಂಡೂರು ಸರಕಾರಿ ಶಾಲಾ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಪಾಟೀಲ್ ಗುರುಗಳು ತಿಳಿಸಿದರು. ಕಾರಟಗಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಪರಿಮಳ ಪಾಟೀಲ್ ರವರು ಅಂಚೆ ಮಾರುಕಟ್ಟೆ ನಿರ್ವಾಹಕರು ಮಲ್ಲಿಕಾರ್ಜುನರವರು ಬ್ರಾಂಚ್ ಪೋಸ್ಟ್ ಮಾಸ್ಟರ್ ಪಲ್ಲವಿ ಕೊಂಗವಾಡ ಹಿರೇಮಠ ಅವರು ಅಂಚೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಸೊಸೈಟಿ ಕಾರ್ಯದರ್ಶಿ ಶಿವರಾಜ್ ಅವರು ದೊಡ್ಡಪ್ಪ ಮುಕ್ಕುಂದಿ ಮನೋಹರ್ ಬಡಿಗೇರ್ ಪಂಪಣ್ಣ ಬಡಿಗೇರ್ ಹನುಮಂತ ಬಡಿಗೇರ್ ವೀರನಗೌಡ ಚೇರ್ಮನ್ ಅಮರೇಗೌಡ ಮಾಲಿಪಾಟೀಲ್ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ ಅವರು ಮತ್ತು ಊರಿನ ಎಲ್ಲಾ ಗ್ರಾಮಸ್ಥರು ಮತ್ತು ಎಲ್ಲಾ ಶಾಖೆ ಅಂಚೆ ಅಧಿಕಾರಿಗಳು ಭಾಗವಹಿಸಿದರು ಮತ್ತು ಅಂಚೆ ಕಚೇರಿಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು

