ಮಾನ್ವಿ : ಪಟ್ಟಣದ ಸರಕಾರಿ ಹಣ್ಣಿನ ತೋಟದಲ್ಲಿ ಇಂದು ಬೆಳಗ್ಗೆ ಕಾರ್ಯಕ್ರಮ ನಡೆಯಿತು . ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಕಲ್ಮಠ ಶ್ರೀಗಳಾದ ಶ್ರೀ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳು ಮಾನ್ವಿ ಇವರು ವಿಶ್ವ ಧ್ಯಾನ ದಿನಾಚರಣೆ ತಮ್ಮ ಆಶೀರ್ವಾದ ವಚನದಲ್ಲಿ ಮಾನವನ ಜೀವನದ ಅಂತರಂಗದಲ್ಲಿ ಆಳವಾಗಿ ಹುಡುಕಿದಾಗ ಜೀವನ ಸಾಕ್ಷಾತ್ಕಾರವಾಗುತ್ತದೆ ಎಂದು ಹಲವಾರು ದೃಷ್ಟಾಂತದ ಮೂಲಕ ಜ್ಞಾನದ ಮತ್ತು ಧ್ಯಾನದ ಮಹತ್ವವನ್ನು ತಿಳಿಸಿದರು. ಹಾಗೂ ಅಂತರಂಗದಲ್ಲಿ ಗಟ್ಟಿಯಾಗಬೇಕಾದರೆ ನಿತ್ಯ ಧ್ಯಾನ ಮಾಡಬೇಕು ಧ್ಯಾನ ಮಾಡಿದಾಗ ಮಾತ್ರ ಉತ್ತಮ ಹವ್ಯಾಸ ಉತ್ತಮ ಆರೋಗ್ಯ ಉತ್ತಮ ಜೀವನ ಸಾಧ್ಯ ಎಂದು ಹೇಳಿದರು. ಈ ಕಾರ್ಯಕ್ರಮದ ಉಪನ್ಯಾಸವನ್ನು ನೀಡಲು ರಘುನಂದನ್ ಶಿಕ್ಷಕರು ಕೋನಾಪುರ ಪೇಟೆ ಶಾಲೆ ಮಾನ್ವಿ ಇವರು ಧ್ಯಾನ ಎಂದರೇನು ಮನಸ್ಸನ್ನು ತರಬೇತಿಗೊಳಿಸಿ, ಏಕಾಗ್ರತೆ ತರಲು ಹಾಗೂ ವ್ಯಕ್ತಿಯನ್ನು ಸಿದ್ಧಗೊಳಿಸಲು ಧ್ಯಾನ ಅವಶ್ಯಕತೆ ಎಂದು ಹೇಳಿದರು ಹಾಗೂ ಧ್ಯಾನದ ಮಹತ್ವವನ್ನು ಹಾಗೂ ಧ್ಯಾನದ ಪ್ರಯೋಜನಗಳ ಕುರಿತು ವಿವರವಾದ ಮಾಹಿತಿಯನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆ ಗೀತೆಯನ್ನು ಕುಮಾರಿ ಜಿ.ದೇವಿಕಾ ಪ್ರಾರ್ಥಿಸಿದರು. ಎಂ ನೀಲಕಂಠಪ್ಪ ಸ್ವಾಗತಿಸಿದರು. ಮೌನ ಮಿತ್ರ ಯೋಗ ಸಮಿತಿಯ ಗುರುಗಳಾದಂತಹ ಮೌನೇಶ್ ಪೋತ್ನಾಳ ವಂದಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಯೋಗ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *