ಸಿಂಧನೂರು : ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಪ್ರಾರಂಭ ಮಾಡಲಾಯಿತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದಂತ ಡಾಕ್ಟರ್ ಮೇರಿ ಭಂಡಾರಿ ಮಗುವಿಗೆ ಪಲ್ಸ್ ಪೋಲಿಯೋ ಹಾಕುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಇದೇ ಸಂದರ್ಭದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಗಳು ತಮಗೆ ನಿಯೋಜನೆಗೊಳಿಸಿರುವ ವಿವಿಧ ಭಾಗದ ಪಲ್ಸ್ ಪೋಲಿಯೋ ಬೂತ್ ಗಳಿಗೆ ವ್ಯಾಕ್ಸಿನ್ ಕ್ಯಾರಿ ತೆಗೆದುಕೊಂಡು ಅತ್ಯಂತ ಉತ್ಸಾಹದಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ತೆರಳಿದರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆ ಸನ್ ರೈಸ್ ಕೂಲ್ ಆಫ್ ನರ್ಸಿಂಗ್ ನ ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳು ಸಹ ಭಾಗವಹಿಸಿ ತಮಗೆ ನಿಯೋಜಿಸಿರುವ ಪಲ್ಸ್ ಪೋಲಿಯೋ ಬೂತುಗಳಲ್ಲಿ ಆರೋಗ್ಯ ಸೇವಕರಾಗಿ ಕಾರ್ಯನಿರ್ವಹಿಸಿದರು ಇದೇ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸಹಾಯಕರಾದಂತಹ ರಂಗನಾಥ್ ಹಾಗೂ ಪಲ್ಸ್ ಪೋಲಿಯೋ ಮೇಲ್ವಿಚಾರಕರಾದಂತ ಹನುಮಂತ ಮತ್ತು ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸನ್ರೈಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

