ಕೊಡೇಕಲ್: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಯುಕ್ತ ಕೊಡೆಕಲ್ ಬಸ್ ನಿಲ್ದಾಣದಲ್ಲಿ ಆರೋಗ್ಯ ನಿರಕ್ಷಣಾಧಿಕಾರಿಗಳಾದ ಶ್ರೀ ಮುಜಾಹಿದ್ ನಮಾಜಕಟ್ಟಿ ರವರು ಮಕ್ಕಳನ್ನು ಪೋಲಿಯೋ ಲಸಿಕೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕೊಡೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಸ್ ನಿಲ್ದಾಣಗಳಲ್ಲಿಯೂ ಪಲ್ಸ್ ಪೋಲಿಯೋ ಬೂತ್ ಅನ್ನು ನಿರ್ಮಿಸಲಾಗಿದೆ ಇದರ ಮೂಲ ಉದ್ದೇಶ ಯಾವುದೇ ಮಗು ಪೋಲಿಯೋದಿಂದ ವಂಚಿತವಾಗಬಾರದು ಎಂಬುದಾಗಿದೆ. ನಾಳೆಯಿಂದ ಪ್ರತಿ ಮನೆ ಮನೆಗೆ ತೆರಳಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇಂದಿನಿಂದ 24ನೇ ಡಿಸೆಂಬರ್ ವರೆಗೂ ನಡೆಯಲಿದೆ ಎಂದರು. ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ಲಕ್ಷಣಗಳು ಕಂಡುಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರೂ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿ ಸುವುದರ ಮುಖಾಂತರ ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಸಹಕರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀರಾಮಚಂದ್ರ ಮುಚ್ಚಟ್ಟಿ ಮೇಲ್ವಿಚಾರಣಾ ಅಧಿಕಾರಿಗಳಾದ ಶ್ರೀ ಸತೀಶ್ ಗಣ್ಯರಾದ ಶ್ರೀ ಅರುಣ್ ಪಾಟೀಲ್, ಸಂಗನಗೌಡ ಪಾಟೀಲ್ ಕಾರ್ಯನಿರ್ವಾಹಕರಾದ ಶ್ರೀ ಶ್ರೀಕಾಂತ ಬಡಿಗೇರ್ ಶಿಕ್ಷಕಿಯರಾದ ರೇಖಾ ಎಸ್ ಕೊಡೆಕಲ್ ಮಠ ಹಾಗೂ ಇತರರು ಉಪಸ್ಥಿತರಿದ್ದರು.


