ಸಿಂಧನೂರ: ಡಿ.21: ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿಂಧನೂರು, ನಲ್ಲಿ ಡಿಸೇಂಬರ್ 21 ರಿಂದ 24 ವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬೂತ ಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಬಸನಗೌಡ ಬಾದರ್ಲಿ , ಶಾಸಕರು ವಿಧಾನಪರಿಷತ್ , ಸಿಂಧನೂರು, ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಹಾಜರಿದ್ದ 5 ವರ್ಷದೊಳಗಿನ ಮಕ್ಕಳಿಗೆ 2 ಹನಿ ಪೋಲಿಯೊ ಲಸಿಕೆ ನೀಡಿ ಮಾತನಾಡುತ್ತಾ ದೇಶವು ಈಗಾಗಲೆ ಕಳೆದ ಹಲವು ವರ್ಷಗಳಿಂದ ಭಾರತವು ಪೋಲಿಯೊ ರೋಗದಿಂದ ಮುಕ್ತವಾಗಿದೆ ನೆರೆಯ ದೇಶಗಳಲ್ಲಿ ಇದರ ಹಾವಳಿ ಹೆಚ್ಚಾಗಿದ್ದು ವಲಸಿಗ ಪ್ರಕರಣಗಳು ಬಾರದಂತೆ ನಿಗಾವಹಿಸಲು ಮತ್ತು ನಿಯಂತ್ರಣಕ್ಕಾಗಿ ನಮ್ಮ ಭಾರತ ದೇಶ ಲಸಿಕೆ ಒದಗಿಸಲು ಮುಂದಾಗುತ್ತಿರುವುದು ಮತ್ತು ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಷಯ ಕಾರಣ ಪ್ರತಿ ವರ್ಷದಂತೆ ಈ ವರ್ಷವೂ ಬಹಳ ಅಚ್ಚುಕಟ್ಟಾಗಿ ನಿರ್ವಹಣೆಗೆ ಆರೋಗ್ಯ ಇಲಾಖೆ ಪಲ್ಸಪೋಲಿಯೊ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದು ಇದರ ಗುರಿಯ ಆಶಯದಂತೆ 90% ಶೇಕಡಾ ಗುರಿ ಬೂತ ಮಟ್ಟದ ದಿನದಂದು ಪೂರ್ಣಗೊಳಿಸಲು ಸಾರ್ವಜನಿಕರು ಮನೆಯಲ್ಲಿನ ಮತ್ತು ಸುತ್ತಮುತ್ತಲಿನ 5ವರ್ಷದೊಳಗಿನ ಮಕ್ಕಳನ್ನು ಸ್ವಯಂಪ್ರೇರಿತವಾಗಿ ಬೂತಗಳಿಗೆ ಕರೆತಂದು ಲಸಿಕೆ ಹಾಕಿಸಲು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಡಾ||ಅಯ್ಯನಗೌಡ ತಾಲೂಕ ಆರೋಗ್ಯ ಅಧಿಕಾರಿಗಳು ಡಾ|| ನಾಗರಾಜ್ ಕಾಟ್ವಾ ಆಡಳಿತ ವೈದ್ಯಾಧಿಕಾರಿಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಡಾ|| ಸುರೇಶ್ ಗೌಡ ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು, ತಾಲೂಕು ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಶ್ರತಿ, ಡಾ.ಮಂಜುನಾಥ ಅಣ್ಣಾಗೌಡ,ಯುನಾನಿ ಆಸ್ಪತ್ರೆಯ ವೈದ್ಯರಾದ ಡಾ.ಅಮ್ಜದ್ ಷರೀಫ್ ,ಸ್ಟ್ಯಾಫ್ ನರ್ಸ ಗುರುಶಾಂತಮ್ಮ,ತೇಜಾ, ಈ ಹಸ್ಪಿಟಲ್ ನ ಡಿ.ಈ.ಓ ಶರಣಬಸವ,ಎನ್.ಸಿ.ಡಿ ಕಾರ್ಯಕ್ರಮ ಸುವರ್ಣಮ್ಮ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಲಯದ ಹಿರಿಯ.ಆರೋಗ್ಯ ಸಹಾಯಕರಾದ ರಂಗನಾಥ ಗುಡಿ,ಸಂಗನಗೌಡ,ತಾಲೂಕಾ ಮೇಲ್ವಿಚಾರಕ ಎಫ್.ಎ.ಹಣಗಿ,ಬಿ.ಹೆಚ್.ಈ ಗೀತಾ ಹಿರೆಮಠ,ಆರ್.ಕೆ.ಎಸ್.ಕೆ ಕೌಂಸ್ಲರ್ ರಾಮಾಂಜನೆಯ,ಕೆಸೆಪ್ ನ ಕೌಂಸ್ಲರ್ ಅಂಬ್ರೇಶ.ಹಿರೆಮಠ ಹಾಗೂ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು ಎಂ.ಬಿ.ಕಾಲೋನಿಯ ಆಶಾ ಕಾರ್ಯಕರ್ತೆಯರಾದ ಮಾಲನಬಿ, ಕಸ್ತೂರಿ ಮತ್ತು ಆಶಾ.ಕಾ.ಕರ್ತೆಯರ ಬಳಗ ಮತ್ತು ಸಾರ್ವಜನಿಕರು ಸಾಥನೀಡಿದರು


