ಸಿಂಧನೂರು ನಗರದ ಬ್ರಾಹ್ಮಣರ ಓಣಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಯುವ ಸಮಿತಿ ಸಂಚಾಲಕರಾಗಿ ನೇಮಕರಾದ ಹನುಮೇಶ ಜಾಗೀರದಾರ ಅವರಿಗೆ ಸಿಂಧನೂರು ತಾಲೂಕ ಬ್ರಾಹ್ಮಣ ಸಮಾಜ ಮತ್ತು ಗಜಾಜನ ಹವ್ಯಾಸ ಯುವಕ ಮಂಡಳಿ ಸಿಂಧನೂರು ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಉಪಸ್ಥಿತಿವಹಿಸಿದ್ದ ವೇದಮೂರ್ತಿ ರಾಮಕೃಷ್ಣಾಚಾರ್ಯ ಗೋನವಾರ ಮಾತನಾಡಿದ ಹನುಮೇಶ ಜಾಹಗೀರದಾರ್ ಸಿಂಧನೂರಿನ ಬ್ರಾಹ್ಮಣ ಸಮಾಜದ ಯುವ ಮುಖಂಡರಾಗಿ ಸಮಾಜಕ್ಕೆ ಸಲ್ಲಿಸಿದ ಸೇವೆ ಮತ್ತು ಅವರ ಸಮಾಜದ ಬಗೆಗಿನ ಕಾಳಜಿಯನ್ನು ಗುರುತಿಸಿ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಎಸ್ ರಘುನಾಥ ಅವರು ರಾಯಚೂರ ಜಿಲ್ಲಾ ಯುವ ಸಮಿತಿ ಸಂಚಾಲಕರಾಗಿ ನೇಮಕ ಮಾಡಿದ್ದು ಅಭಿನಂದನೀಯ ಎಂದರು.
ಹಿರಿಯ ಪತ್ರಕರ್ತ ಮತ್ತು ವಕೀಲರಾದ ಪ್ರಲ್ಹಾದಗುಡಿಯವರು ಮಾತನಾಡಿ ಸಹೋದರ ಸಮನಾದ ಹನುಮೇಶ ಜಾಹಗೀರದಾರ್ ಅವರು ನಮ್ಮ ಸಮಾಜದ ಕ್ರೀಯಾಶೀಲ ಮುಖಂಡರಾಗಿ ಸಿಂಧನೂರಿನ ಬ್ರಾಹ್ಮಣ ಸಮಾಜದ ಪರವಾಗಿ ಸದಸ್ಯತ್ವ ಅಭಿಯಾನ ಮಾಡಿಸುವಲ್ಲಿ ಹೆಚ್ಚು ಶ್ರಮವಹಿಸಿದ್ದರು ಮತ್ತು ಈ ಸದಸ್ಯತ್ವ ಅಭಿಯಾನದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮುಖಂಡದ ಗಮನಸೆಳೆದರು ಎಂದು ಅಭಿನಂದಿಸಿದರು.
ಇದೆ ರೀತಿ ಪಂಡಿತ ರಂಗನಾಥ ಆಚಾರ್ಯ ಸಾಲಗುಂದ, ಮಾಜಿ ನಗರಸಭೆ ಸದಸ್ಯರಾದ ವೆಂಕಟರಾವ ಬಂಡಿ ವಕೀಲ, ಗುಂಡುರಾವ್ ಚೆನ್ನಳ್ಳಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಗೋವಿಂದರಾವ್ ಕುಲಕರ್ಣಿ ಮಾತನಾಡಿದರು. ಶಿಕ್ಷಕ ಕೃಷ್ಣ ಮೂಲ್ಕಿ ಸಮುದ್ರ ನಿರೂಪಿಸಿದರು.
ನಂತರ ಇದೇ ಸಮಯದಲ್ಲಿ ಜಾಗೀರದಾರ ಕುಟುಂಬದಿಂದ ತಾಲೂಕು ಬ್ರಾಹ್ಮಣ ಸಮಾಜದ ಗುರುಗಳು,ಹಿರಿಯ,ಮುಖಂಡರುಗಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಗಜಾನನ ಯುವಕ ಮಂಡಲದ ಅಧ್ಯಕ್ಷ ರಾಘವೇಂದ್ರಾಚಾರ್ ಮಸ್ಕಿ, ಪರಶುರಾಮದಳದ ಅವಿನಾಶ ಬಂಡಿ, ರಾಘವೇಂದ್ರ ಸ್ವಾಮಿಗಳ ಮಠದ ವಿಚಾರಣಾಕರ್ತ ರಾಘವೇಂದ್ರರಾವ್ ಕುಲ್ಕರ್ಣಿ, ವೆಂಕಟೇಶ ಸಿದ್ರಾಂಪುರ, ಪ್ರಲ್ಹಾದ ಕುಲ್ಕರ್ಣಿ, ಗುರುರಾಜ ಆಲದಾಳ, ಪ್ರಭಾಕರ ದೇಶಪಾಂಡೆ, ರಾಘವೇಂದ್ರ ಸಾಸವಿಹಾಳ ಸೇರಿದಂತೆ ಜಾಗೀರದಾರ ಕುಟುಂಬದವರು ಇದ್ದರು.

