ಸಿಂಧನೂರು ಡಿಸೆಂಬರ್ 21: ಸಮೀಪದ ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂಗನವಾಡಿ ಕೇಂದ್ರ 3ನೇ ಕೇಂದ್ರದಲ್ಲಿ ಚಂದ್ರು ಭೂಪಾಲ್ ನಾಡಗೌಡರು ಮಕ್ಕಳಿಗೆ ಪೋಲಿ ಹನಿ ಹಾಕುವುದರ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಕ್ಕಳ ಉತ್ತಮ ಆರೋಗ್ಯಕ್ಕೆ ತಪ್ಪದೇ ಎರಡು ಹನಿ ಪೋಲಿಯೋ ಹಾಕುವ ಮೂಲಕ ಮಕ್ಕಳಲ್ಲಿ ಅಂಗವಿಕಲತೆ ಬರದಂತೆ ತಡೆಗಟ್ಟಬಹುದು ಪೋಲಿಯೋ ವಿರುದ್ಧ ಭಾರತ ವಿಜಯ ಸಾಧಿಸಿದ್ದರು. ಪಕ್ಕದ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ತಪ್ಪದೇ ನಿಮ್ಮ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು ಎಂದರು.
ಡಾಕ್ಟರ ಉಮೇಮಾ ಅಮೇರಾ ವೈದ್ಯಾಧಿಕಾರಿಗಳು ಅವರು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೆರೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳ 3199 ಮಕ್ಕಳಿಗೆ ಪೋಲಿಯೋ ಹನಿ ಗುರಿಯನ್ನು ಹೊಂದಲಾಗಿದೆ ದಿನಾಂಕ ಡಿಸೆಂಬರ್ 21 ರಿಂದ 24ರ ವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ನೆಡೆಯುತ್ತಿದ್ದು ನೂರಕ್ಕೆ ನೂರರಷ್ಟು ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು ಸುನಂದಮ್ಮ ,ಎಂ ಚಂದ್ರಶೇಖರ ವಿರುಪಾಕ್ಷಿ ಹಟ್ಟಿ ಗಂಗಣ್ಣ ಹಿರೇ ಕುರುಬರ ಯಲ್ಲಪ್ಪ ಜಾನೇಕಲ್ ರೇವಣ್ಣ ಸಂಗಟಿ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಉದಯ ಕುಮಾರ , ಮಹೇಶ ,ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ರಾಧಾ ಕೊಂಡಿ ಅಂಗನವಾಡಿ ಕಾರ್ಯಕರ್ತರಾದ ಇಂದ್ರಮ್ಮ, ದುರ್ಗಮ್ಮ ಆಶಾ ಕಾರ್ಯಕರ್ತರಾದ ಮಲ್ಲಮ್ಮ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *