ಸಿಂಧನೂರು : ಸಿಂಧನೂರ್ ರಾಮಕೃಷ್ಣ ಆಶ್ರಮದ ವತಿಯಿಂದ ಡಿ 21 “ವಿವೇಕ ಪಥ ರಾಷ್ಟ್ರದ ಹಿತ ” 5ನೇ ಕಾರ್ಯಕ್ರಮವನ್ನು ಸಿಂಧನೂರಿನ ಸರ್ವೋದಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು.*
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜ್ ರವರು ಅಗ್ನಿ ಅವಘಡದಿಂದಾಗುವ ಪರಿಣಾಮಗಳು & ಮುಂಜಾಗ್ರತ ಕ್ರಮಗಳ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ಅಧ್ಯಯನ, ಏಕಾಗ್ರತೆ ಬಗ್ಗೆ ತಿಳಿಸಿದರು..*
ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಮುನಿರೆಡ್ಡಿ, ಅಗ್ನಿ ಶಾಮಕರು, ಅಗ್ನಿಶಾಮಕ ಠಾಣೆ ಸಿಂಧನೂರು ಇವರು ಅಗ್ನಿ ಅವಘಡ & ಸುರಕ್ಷತಾ ಕ್ರಮಗಳು ವಿಷಯದ ಕುರಿತು ಅಗ್ನಿ ಅವಘಡಕ್ಕೆ ಕಾರಣಗಳು, ಪರಿಹಾರ ಕ್ರಮಗಳು, ಸುರಕ್ಷತಾ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅತ್ಯಪಯುಕ್ತ ಮಾಹಿತಿ ನೀಡಿದರು…*
ಕಾರ್ಯಕ್ರಮದಲ್ಲಿ ಶ್ರೀ ಚಿದಾನಂದಪ್ಪ, ಮು. ಗು. ಸರ್ವೋದಯ ಪ್ರೌಢ ಶಾಲೆ & ಶ್ರೀ ಪ್ರಭು, ಮು. ಗು. ಸರ್ವೋದಯ ಹ ಪ್ರಾಥಮಿಕ ಶಾಲೆ ಸಿಂಧನೂರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು..


