ರಾಯಚೂರು : ಎಸ್.ಐ.ಒ ರಾಯಚೂರು ಜಿಲ್ಲಾಧ್ಯಕ್ಷರಾಗಿ ಇಮ್ತಿಯಾಜ್ ಸಿಂಧನೂರು ಅವರು 2026 ನೆಯ ಅವಧಿಗೆ ಆಯ್ಕೆಯಾಗಿದ್ದಾರೆ.ಇಮ್ತಿಯಾಜ್ ಅವರು ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಬಂದಿದ್ದಾರೆ ಅವರು ಸಿಂಧನೂರಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಸಿಂಧನೂರಿನಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ ಅವರಿಗೆ ದೈವಿಕ ಮಾರ್ಗದಶನದೇಡೆಗೆ ಕರೆದೊಯ್ಯಲು ಉತ್ತಮ ಸೇವೆ ನೀಡಿದ್ದಾರೆ ಹಾಗೂ ಸಿಂಧನೂರಿನ ಎಸ್.ಐ.ಒ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ,ಕಾರ್ಯದರ್ಶಿಯಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ ಹಾಗೂ ಸಿಂಧನೂರಿನಲ್ಲಿ ಅನೇಕ ಪರಿಸರ ಹಾಗೂ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ ಇಂದು ನಡೆದ ಚುನಾವಣೆಯಲ್ಲಿ ಅವರು ಜಿಲ್ಲಾಧ್ಯಕ್ಷರಾಗಿರುವುದು ಖುಷಿಯ ಸಂಗತಿ ಅಲ್ಲಾಹ್ ಅವರ ನಾಯಕತ್ವದಲ್ಲಿ ಸ್ಥಿರತೆ (ಇಸ್ತಿಕಾಮತ್), ಸಾಮರ್ಥ್ಯ (ಸಲಾಹಿಯತ್) ಮತ್ತು ಧೈರ್ಯವನ್ನು ಅನುಗ್ರಹಿಸಲಿ. ವಿದ್ಯಾರ್ಥಿ ಸಮುದಾಯದ ನಡುವೆ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಿ, ಘಟಕವು ಯಶಸ್ಸು ಸಾಧಿಸಲಿ,ಇನ್ನೂ ಹೆಚ್ಚು ಸಂಘಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ನೈತಿಕ ಅಭಿವೃದ್ಧಿ ಹಾಗೂ ವಿದ್ಯಾರ್ಥಿ ಯುವಕರಲ್ಲಿ ತಿಳುವಳಿಕೆ ಹಾಗೂ ವಿದ್ಯಾರ್ಥಿಗಳಿಗೆ ಸುನ್ನತ ಪ್ರಕಾರ ತಮ್ಮ ವಯಕ್ತಿಕ ಹಾಗೂ ಸಾಮೂಹಿಕ ಜೀವನವನ್ನು ಸಾಗಿಸಲು ಪ್ರೇರೇಪಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣಕ್ಕೆ ಪ್ರೋತ್ಸಾಹ ನೀಡಿ ಎಸ್.ಐ.ಒ ದ ಕಲಿಕೆಯೇ ಕಲ್ಯಾಣ ಅಭಿಯಾನವನ್ನು ಪೂರ್ಣಗೊಳಿಸಿ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ

Leave a Reply

Your email address will not be published. Required fields are marked *