ಅರಕೇರಾ :
ತಾಲೂಕಿನ ನೀಲಗಲ್ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಜಾತ್ರಾ ಮಹೋತ್ಸವ ಜ.4 ರಿಂರ ಜ.13 ರವರೆಗೆ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ಸೋಮವಾರ ತಿಳಿಸಿದ್ದಾರೆ.
ಲೋಕ ಕಲ್ಯಾಣಾರ್ಥವಾಗಿ ಜ.4 ರಂದು ಮಹಾ ಚಂಡಿಕಾ ಯಾಗ, ಪ್ರತಿ ನಿತ್ಯ ಸಂಜೆ 6 ಗಂಟೆಯಿAದ ಪುರಾಣ ಪ್ರವಚನ, ಜ.9 ರಂದು ಬೆ.9 ಗಂಟೆಯಿAದ ಉಚಿತ ಆರೋಗ್ಯ ಶಿಬಿರ, ಬೆ.10 ಗಂಟೆಗೆ ಗುರು ಆರಾಧನೆ ಮತ್ತು ಅಯ್ಯಾಚಾರ, ಸಂಜೆ 5 ಗಂಟೆಗೆ ಮಹಿಳೆಯರಿಂದ ಉಚ್ಛಾಯ ರಥೋತ್ಸವ ನಂತರ ದೀಪೋತ್ಸವ ನಡೆಯಲಿದೆ. ಜ.10 ರಂದು ಬೆ.8 ಗಂಟೆಗೆ ಭಕ್ತಾದಿಗಳಿಂದ ಶ್ರೀ ಶಾಂಭವಿ ದೇವಿ ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ, ಬೆ.11.30 ಕ್ಕೆ ಸಾಮೂಹಿಕ ವಿವಾಹ, ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಜ.11 ಕ್ಕೆ ಬೆ.9 ಗಂಟೆಗೆ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ, ಸಂಜೆ 5.30 ಕ್ಕೆ ಕಡುಬಿನ ಕಾಳಗ, ಜ.12 ರಂದು ಬೆ.7 ಗಂಟೆಗೆ ಮಹಾ ಚಂಡಿಕಾ ಯಾಗ ಪೂರ್ಣಾಹುತಿ, ಸಂಜೆ 6 ಗಂಟೆಗೆ ಮಕ್ಕಳಿಂದ ನೃತ್ಯೋತ್ಸವ, ಜ.13 ರಂದು ಸಂಜೆ 6 ಗಂಟೆಯಿAದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಾಮೂಹಿಕ ವಿವಾಹಕ್ಕೆ ಈಗಾಗಲೇ ನೋಂದಣಿ ಕಾರ್ಯ ಶುರುವಾಗಿದ್ದು, ವಯಸ್ಸಿನ ಪ್ರಮಾಣ ಪತ್ರ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಭಾವಚಿತ್ರವಿರುವ ಶಾಲಾ ದೃಢಿಕರಣ ಪತ್ರ, ಜಾತಿ ಮತ್ತು ಆದಾಯ, ವಾಸಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಪಡಿತರ ಚೀಟಿ, 4 ಭಾವಚಿತ್ರ, 2 ಲಗ್ನ ಪತ್ರಿಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9448248888, 9741999401 ಗೆ ಸಂಪರ್ಕಿಸಲು ಕೋರಿದ್ದಾರೆ.
