ಶ್ರೀ ಸತ್ಯ ಸಾಯಿಬಾಬಾ ಸೇವಾ ಸಂಸ್ಥೆಗಳು ರಾಯಚೂರು ನೇತೃತ್ವ ಹಾಗೂ ಸಹಕಾರದೊಂದಿಗೆ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಸಾನಿಧ್ಯದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಮತ್ತು ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಸಾಯಿ ದರ್ಶಿನಿ ಕಲ್ಯಾಣ ಮಂಟಪದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ರವರ ಪೂಜಾ ಕಾರ್ಯಕ್ರಮ ಹಾಗೂ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ ರೋಗ ನರರೋಗ ಕ್ಯಾನ್ಸರ್ ಮೂತ್ರಪಿಂಡ ಕಲ್ಲು ಕಾಯಿಲೆ ಹಾಗೂ ಇತರ ಅನೇಕ ರೋಗಗಳಿಗೂ ಸಹ ಚಿಕಿತ್ಸೆ ಮಾಡಲಾಯಿತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿಶೇಷವಾಗಿ ಉಚಿತ ಇಸಿಜಿ ಟುಡಿ ಎಕೋ ಗಳಂತಹ ಪರೀಕ್ಷೆಗಳ ಸೌಲಭ್ಯ ಗಳನ್ನ ಸಹ ಉಚಿತವಾಗಿ ಒದಗಿಸಲಾಯಿತು 350ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಿ ಔಷಧೋಪಚಾರ ನೀಡಲಾಯಿತು, 50 ರೋಗಿಗಳಿಗೆ ಇಸಿಜಿ ಹಾಗೂ 52 ರೋಗಿಗಳಿಗೆ ಎಕೋ ಪರೀಕ್ಷೆ ಮಾಡಲಾಯಿತು, ಹೆಚ್ಚಿನ ಚಿಕಿತ್ಸೆಗಾಗಿ 35 ರೋಗಿಗಳನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿಗೆ ಶಿಫಾರಸು ಮಾಡಲಾಯಿತು. ಉಚಿತ ಆರೋಗ್ಯ ತಪಾಸಣೆಯ ಕೋ ಆರ್ಡಿನೇಟರ್ ಆದಂತಹ ಶ್ರೀ ರಾಘವೇಂದ್ರ ಅವರು ಉಚಿತವಾಗಿ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸುವುದಾಗಿ ಭರವಸೆ ನೀಡಿದರು, ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್, ಪ್ಯಾರಾ ಮೆಡಿಕಲ್ ಹಾಗೂ ಫಾರ್ಮಸಿ ವಿದ್ಯಾರ್ಥಿಗಳು ರೋಗಿಗಳ ಆರೈಕೆ ಬಿಪಿ ಶುಗರ್ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಆರೋಗ್ಯ ಯೋಧರಾಗಿ ತಮ್ಮ ಸೇವೆಯನ್ನು ನೀಡಿದರು, ಸನ್ ರೈಸ್ ಸ್ಕೂಲ್ ಆಫ್ ಆಫ್ ನರ್ಸಿಂಗ್ ನ ಪ್ರಾಚಾರ್ಯರಾದ ಲಾಜರ್ ಸಿರಿಲ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಈ ತರಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಸಪ್ತಗಿರಿ ಆಸ್ಪತ್ರೆಯ ಸೇವೆ ಶ್ಲಾಘನೀಯ ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಸಪ್ತಗಿರಿ ಆಸ್ಪತ್ರೆಯ ವೈದ್ಯರುಗಳಿಗೆ ಮತ್ತು ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ನ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು, ಇದೇ ಸಂದರ್ಭದಲ್ಲಿ ಇರ್ಫಾನ್ ಕೆ ಅತ್ತಾರ್ ಅಧ್ಯಕ್ಷರು ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಿಂದನೂರು ಇವರು ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಕಾರ್ಯ ವೈಖರಿಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು, ಈ ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಸತ್ಯಸಾಯಿ ಸೇವಾ ಸಮಿತಿ ಪಗಡೆದಿನ್ನಿ ಪೈ ಕ್ಯಾಂಪ್ ವತಿಯಿಂದ ಏರ್ಪಡಿಸಲಾಗಿತ್ತು, ಉಚಿತ ಆರೋಗ್ಯ ತಪಾಸಣೆಯ ಉಸ್ತುವಾರಿಯನ್ನು ಶ್ರೀ ಚಿಟ್ಟೂರಿ ಶ್ರೀನಿವಾಸ್ ( ವಾಸು) ಸಂಚಾಲಕರು ಅಖಿಲ ಕರ್ನಾಟಕ ಕಮ್ಮ ಯುವಶಕ್ತಿ ಪಿ ಡಬ್ಲ್ಯೂ ಡಿ ಕ್ಯಾಂಪ್ ಸಿಂಧನೂರು, ಶ್ರೀ ಸುಭಾಷ್ ಚಂದ್ರ ಬೋಸ್ ಅಧ್ಯಕ್ಷರು ರಾಯಚೂರು ಜಿಲ್ಲಾ ಶ್ರೀ ಸತ್ಯಸಾಯಿ ಆರ್ಗನೈಜೇಷನ್, ಶ್ರೀ ಬಿ ಶ್ರೀನಿವಾಸ್ ರೆಡ್ಡಿ ಅಧ್ಯಕ್ಷರು ಶ್ರೀ ಸತ್ಯಸಾಯಿ ಸೇವಾ ಸಮಿತಿ ಪಗಡದಿನ್ನಿ ಪೈ ಕ್ಯಾಂಪ್ ಕಮ್ಮ ರಾಮಕೃಷ್ಣ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಇವರುಗಳು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು ಸಪ್ತಗಿರಿ ಆಸ್ಪತ್ರೆ ವೈದ್ಯರು ಸತ್ಯಸಾಯಿ ಸೇವಾ ಸಮಿತಿ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು



