ಸಿಂಧನೂರು —- ಪ್ಯಾಂಟೆರಾ ಅಗ್ರಿ ಸೈನ್ಸ್ ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ವತಿಯಿಂದ ಸಂಸ್ಥಾಪಕರಾದ ಲೋಕನಾಥನ್ ಗಿರಿಧರನ್ ಹಾಗೂ ನಿರ್ದೇಶಕರಾದ ಪ್ರಮೋದ್ ಕಡುಕೋಳ ಇವರುಗಳ ಆಶಯದಂತೆ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ” ನೊಂದ ಜೀವಿಗಳ ನಾಡಿಮಿಡಿತ”ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಈ ಸಂಸ್ಥೆಯ ಸಂಸ್ಥಾಪಕರ ಹಾಗೂ ನಿರ್ದೇಶಕರ ಜನ್ಮ ಸಾರ್ಥಕ ದಿನವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ಯಾಂಟೇರಾ ಅಗ್ರಿ ಸೈನ್ಸಸ್ ನ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಜಡ್ ಎಸ್ ಎಮ್ ಗಳಾದ ಕೆ. ವೀರೇಶ ಮಾತನಾಡಿ ನಮ್ಮ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕರು ನೆಲೆ ಇಲ್ಲದ ಜೀವಿಗಳ ಬಗ್ಗೆ ಅನಾಥರ ಬಗ್ಗೆ ಬಹಳ ಆಸಕ್ತಿ ಹೊಂದಿದಂತಹ ಇವರುಗಳಿಗೆ ಕಾರುಣ್ಯ ಆಶ್ರಮದ ಹಿರಿಯರ ಹಾಗೂ ವಯಸ್ಕರ ಬುದ್ಧಿಮಾಂಧ್ಯರ ಆಶೀರ್ವಾದ ಸದಾವಕಾಲವಿರಲಿ. ನಮ್ಮ ಚನ್ನಬಸಯ್ಯ ಸ್ವಾಮಿಯವರು ನಿರಂತರ ತಮ್ಮ ಜೋಳಿಗೆಯಿಂದ ಸುಮಾರು ವರ್ಷಗಳಿಂದ ಅನಾಥರಿಗೆ ಆಶ್ರಯ ಕಲ್ಪಿಸಿ ಮತ್ತು ಅನೇಕ ಹಲವಾರು ಜಾಗೃತಿಗಳ ಮೂಲಕ ಸಮಾಜವನ್ನು ಶುದ್ಧೀಕರಿಣ ಮಾಡುವಂತಹ ಕಾರ್ಯಕ್ಕೆ ಮುಂದಾಗಿರುವುದು ನಮ್ಮ ಭಾರತೀಯ ಸಂಸ್ಕೃತಿಗೆ ಹೆಮ್ಮೆಯ ವಿಷಯವಾಗಿದೆ. ಮನುಕುಲದ ಮಾನವೀಯತೆಯ ಮಂದಿರವಾಗಿದೆ ಈ ನಮ್ಮ ಕಾರುಣ್ಯ ಆಶ್ರಮ. ಇಂತಹ ಮಂದಿರದಲ್ಲಿ ಆಶ್ರಯ ಪಡೆದಿರುವವರು ಶರಣ ಸ್ವರೂಪಿಗಳು ದೇವರ ಸಮಾನರು ಮಾನವೀಯತೆ ಮೌಲ್ಯಗಳನ್ನು ಎತ್ತಿ ಹಿಡಿಯುವ ಕರುಣೆಯ ಕುಟುಂಬವಾಗಿದೆ ಕಾರುಣ್ಯ ಆಶ್ರಮ ಈ ಆಶ್ರಮಕ್ಕೆ ನಮ್ಮ ಕಂಪನಿಯು ಕೈ ಜೋಡಿಸುತ್ತದೆ. ಎಂದು ಮಾತನಾಡಿದರು ನಂತರ ಇವರನ್ನು ಆಶ್ರಮದವತಿಯಿಂದ ಸನ್ಮಾನಿಸಿ ಗೌರವಿಸಿ ಸಿದ್ದಗಂಗಾ ಶ್ರೀಗಳ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ಯಾಂಟೆರಾ ಅಗ್ರಿ ಸೈನ್ಸ್ ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಪದಾಧಿಕಾರಿಗಳಾದ ನರೇಂದ್ರ. ವಿರೂಪಾಕ್ಷಪ್ಪ ಮಾನವಿ. ಪಾಲಾಕ್ಷಿ. ರಮೇಶ. ರಾಘವೇಂದ್ರರಾಜ. ನರೇಂದ್ರ ಹಾಗೂ ಆಶ್ರಮದ ಆಡಳಿತಾಧಿಕಾರಿಗಳಾದ ಅವಿನಾಶ ದೇಶಪಾಂಡೆ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ.. ಜ್ಯೋತಿ. ಅನೇಕರು ಉಪಸ್ಥಿತರಿದ್ದರು

