ತಾಳಿಕೋಟಿ: ಕ್ರೀಡೆಗಳಿಗೆ ಹೆಸರುವಾಸಿಯಾದ ಪಟ್ಟಣವಾಗಿದೆ. ಇಲ್ಲಿ ಎಲ್ಲ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ಹಾಗೂ ಸಹಕಾರವಿದೆ.ಈ ವಾಲಿಬಾಲ್ ಪಂದ್ಯಾವಳಿಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಿ ಅದು ನಮ್ಮ ಪಟ್ಟಣದ ಕೀರ್ತಿಯನ್ನು ಹೆಚ್ಚಿಸಲಿ ಎಂದು ವಿವಿ ಸಂಘದ ಚೇರ್ಮನ್ ವಿ.ಸಿ.ಹಿರೇಮಠ ಹೇಳಿದರು. ಪಟ್ಟಣದ ಎಸ್ ಕೆ ಪಿಯು ಕಾಲೇಜ್ ಮೈದಾನದಲ್ಲಿ ತಾಳಿಕೋಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ತಾಳಿಕೋಟಿ ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಷನ್-2 ಪಂದ್ಯಾವಳಿಯನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ವಿ.ವಿ.ಸಂಘದ ವತಿಯಿಂದ ದಕ್ಷಿಣ ಭಾರತದ ವಿಶ್ವವಿದ್ಯಾಲಯಗಳ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಸಂಘಟಿಸಲು ಪ್ರಯತ್ನಿಸಲಾಗುತ್ತಿದೆ ಇದಕ್ಕೆ ಅನುಮತಿ ಸಿಕ್ಕಲ್ಲಿ ಇದರ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ವಿ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಮಾತನಾಡಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳು ಕ್ರೀಡಾ ಮನೋಭಾವದೊಂದಿಗೆ ಆಟವಾಡಲು ಪ್ರಯತ್ನಿಸಬೇಕು ನಿರ್ಣಾಯಕರ ನಿರ್ಣಯಗಳನ್ನು ಗೌರವಿಸಬೇಕು ಯಾವುದೇ ರೀತಿಯ ವಾದ ವಿವಾದಗಳಿಗೆ ಅವಕಾಶ ಮಾಡಿಕೊಡಬಾರದು. ವಿವಿ ಸಂಘವು ಸದಾ ಆಟಗಾರರಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಡಿ.ಬಿ. ಹೆಬ್ಬಾಳ, ಹಿರಿಯ ವಾಲಿಬಾಲ್ ಕ್ರೀಡಾಪಟು ಮಹೇಶ ಚಲವಾದಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಾಳಿಕೋಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಕಟ್ಟಿಮನಿ ಮಾತನಾಡಿ ಪಟ್ಟಣದಲ್ಲಿ ಎರಡನೇ ಬಾರಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು ಇದಕ್ಕೆ ವಿ.ವಿ. ಸಂಘದ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ವಿಶೇಷವಾಗಿ ಪಟ್ಟಣದ ವಾಲಿಬಾಲ್ ಹಿರಿಯ ಆಟಗಾರರ ಸಂಪೂರ್ಣ ಸಹಕಾರ ಮಾರ್ಗದರ್ಶನ ನಮ್ಮೊಂದಿಗೆ ಇದೆ ನಾನು ಕ್ಲಬ್ ವತಿಯಿಂದ ಅವರಿಗೆ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಇಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರರ ಒಂದು ಪಂದ್ಯಾವಳಿ ನಡೆಯಬೇಕೆಂದು ಅವರ ಆಸೆಯಾಗಿದೆ ಅದನ್ನು ಕಾರ್ಯರೂಪಕ್ಕೆ ತರಲು ನಾವೆಲ್ಲರೂ ಅವರೊಂದಿಗೆ ಸಹಕರಿಸುತ್ತೇವೆ ಎಂದು ತಿಳಿಸಿದರು. ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿವೆ. ಉದ್ಘಾಟನಾ ಸಮಾರಂಭದಲ್ಲಿ ವಿವಿ ಸಂಘದ ಕಾರ್ಯದರ್ಶಿ ಎಂ ಎಸ್ ಸರಶೆಟ್ಟಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಸಜ್ಜನ, ಎಸ್ಕೆ ಪಿಯು ಕಾಲೇಜ್ ಅಧ್ಯಕ್ಷ ಎಂ.ಆರ್.ಕತ್ತಿ, ಎಸ್ ಕೆ ಪ್ರೌಢಶಾಲೆ ಅಧ್ಯಕ್ಷ ಮಹಾಂತೇಶ್ ಕತ್ತಿ, ಎಸ್ ಕೆ ಬಾಲಕಿರ ಪ್ರೌಢಶಾಲೆ ಅಧ್ಯಕ್ಷ ಐಬಿ ಬಿಳೆಭಾವಿ, ನಿವೃತ್ತ ದೈಹಿಕ ಶಿಕ್ಷಕ ಅಶೋಕ ಬಿರಾದಾರ, ಡಾ.ನಜೀರ ಕೋಳ್ಯಾಳ, ಡಾ.ಅನೀಲಕುಮಾರ ಇರಾಜ, ನಿರಂಜನಶಾ ಮಕಾನದಾರ,ಫಯಾಜ್ ಉತ್ನಾಳ, ಸಂಜೀವ ಹಜೇರಿ, ಪರಶುರಾಮ ಕಟ್ಟಿಮನಿ, ಕಳಕೂಸ ರಂಗರೇಜ, ಸಂಜು ಹಜೇರಿ, ರಾಘು ಮಾನೆ, ನಬಿ ರಸೂಲ್ ನಾಯ್ಕೋಡಿ, ನೀಲಕಂಠ ಕೊಣ್ಣೂರ, ವೀರೇಶ್ ಗದಗ, ರಾಮನಗೌಡ
ದದ್ದಲ, ಶೌಕತ್ ನಾಲಬಂದ, ಈಶ್ವರ್ ಹೂಗಾರ, ಸೌರಭ ಕುಲಕರ್ಣಿ, ಮಲ್ಲನಗೌಡ ಪಾಟೀಲ, ನೂರ ಬಿಸ್ತಿ, ಲಾಲಸಾಬ ಅಸ್ಕಿ, ವಿಜಯ ಬೊಮ್ಮನಹಳ್ಳಿ ಹಾಗೂ ಕ್ರೀಡಾಪಟುಗಳು ಇದ್ದರು.

Leave a Reply

Your email address will not be published. Required fields are marked *