ಕರ್ನಾಟಕದ ಕಲ್ಬುರ್ಗಿಯಲ್ಲಿ ಇರುವ ಕೇಂದ್ರೀಯ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ 2025-26 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು ಡಿಸೆಂಬರ್ 14 ರಿಂದ ಜನವರಿ 14ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾರ್ಚ್‍ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಬಿಜಿನೆಸ್ ಮ್ಯಾನೇಜ್ಮೆಂಟ್ ಮುಖ್ಯಸ್ಥರಾದ ಡಾ.ಸೋಫಿಯ ಪರ್ವೀನ್ ಅವರು ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಪತ್ರಕರ್ತರ ಜೊತೆ ಶನಿವಾರ ಮಾತನಾಡಿದ ಅವರು, 2009ರಲ್ಲಿ ಆರಂಭವಾದ ಕೇಂದ್ರೀಯ ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣ, ಗ್ರಂಥಾಲಯ, ಹಾಸ್ಟಲ್ ಸೇರಿ ಶೈಕ್ಷಣಿಕ ಪೂರಕ ಸೌಲಭ್ಯಗಳನ್ನು ಹೊಂದಿದೆ.

ಈ ವಿಶ್ವವಿದ್ಯಾಲಯದಲ್ಲಿ 18 ಕೋರ್ಸ್‍ಗಳಿವೆ. ಈ ವರ್ಷದ ಶೈಕ್ಷಣಿಕ ಸಾಲಿನಿಂದ ಲೈಬ್ರರಿ ಸೈನ್ಸ್, ಬಾಟನಿ, ಪ್ರಾಣಿಶಾಸ್ತ್ರ, ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಸೇರಿದಂತೆ ಆರು ಹೊಸ ಕೋರ್ಸ್‍ಗಳು ಪ್ರಾರಂಭವಾಗಿವೆ. ಎಂಬಿಎ, ಎಂಕಾಂ ಸೋಷಿಯಾಲಜಿ, ಎಂಸಿಎ, ಎಲ್‍ಎಲ್‍ಎಂ ಸೇರಿ ವಿವಿಧ ಕೋರ್ಸ್‍ಗಳಿವೆ ಎಂದರು.

ಎನ್‍ಟಿಎ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಸೀಟನ್ನು ಪಡೆಯಬೇಕು. ಪದವಿ 5 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಕೂಡ ಈ ಪರೀಕ್ಷೆಗೆ ಪ್ರವೇಶವಿದೆ. ಅರ್ಜಿ ಸಲ್ಲಿಸುವಿಕೆ, ಫಲಿತಾಂಶ ಎಲ್ಲವದೂ ಆನ್‍ಲೈನ್‍ನಲ್ಲಿ ನಡೆಯಲಿದೆ.

ಇಂಗ್ಲೀಷ್‍ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಿ ಮೀಸಲಾತಿ ಸೌಲಭ್ಯಗಳನ್ನು ಪಡೆಯಬೇಕು. ಅರ್ಜಿ ಸಲ್ಲಿಸಲು ಆಸಕ್ತರು ವಿವರಗಳಿಗಾಗಿ hhttps://nta.ac.in/ಭೇಟಿ ನೀಡಿ ಮಾಹಿತಿ ಪಡೆಯಬೇಕು. ವಿವರಗಳಿಗಾಗಿ ದೂರವಾಣಿ ಸಂಖ್ಯೆ : 011-40759000 / 69227700 ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *