ಲಿಂಗಸಗೂರು:
ಲಿಂಗಸಗೂರು ತಾಲೂಕ ಚಿಕ್ಕ ಹೆಸರೂರು ಗ್ರಾಮದ ಕಿರಣ್ ಕುಮಾರ್ ಇವರು ಕರ್ನಾಟಕ ಜನ ಜಾಗೃತಿ ಸಮಿತಿ ಅಧ್ಯಕ್ಷರು ಹಾಗೂ ಪ್ರಸ್ತುತವಾಗಿ ಎಂ ವಿಶ್ವೇಶ್ವರಯ್ಯ ಪಿಯು ಮ್ಯಾನೇಜರ್ ಮತ್ತು ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇವರು.
ಶ್ರೀ ಚಿನ್ನಪ್ಪ ಮರಿಯಮ್ಮ ದಂಪತಿಗಳಿಗೆ 4 ಜನ ಸೋದರರು,2ಸಹೋದರಿಯರು.ಕಿರಣ್ ಕುಮಾರ್ ತಮ್ಮ ವಿದ್ಯಾಭ್ಯಾಸವನ್ನು ಮುದುಗಲ್ಲು ಹಾಗೂ ಬಳ್ಳಾರಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ.2001-03 ವರೆಗೆ ಬಿಡಿ ಡಿಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಇವರು.ನಂತರ 2003 -06 ವರೆಗೆ ಜಲನಯನ ಯೋಜನೆ ಅಡಿಯಲ್ಲಿ ಫೀಲ್ಡ್ ಗೈಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.ಹಾಗೂ ಸಮುದಾಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತುಮಕೂರಿನಲ್ಲಿ ಹಾಸನ ಅರಣ್ಯ ಪ್ರದೇಶಕ್ಕೆ ವಿಭಾಗ 2011 ರಿಂದ 2024ರ ಸಮನ್ವಯ ಅಧಿಕಾರಿಯಾಗಿ ಮೈಸೂರು ವಿಭಾಗ ಬಂಡಿಪುರ ವಿಭಾಗ, ಹುಣಸೂರು ವಿಭಾಗ,ಕೊಳ್ಳೇಗಾಲ ವಿಭಾಗ,ಬೆಂಗಳೂರು ಗ್ರಾಮಾಂತರ ವಿಭಾಗ,ಈ ಪ್ರದೇಶ ಅರಣ್ಯ ವಿಭಾಗದಲ್ಲಿ ನಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ.ಲಿಂಗಸಗೂರಿನ ಲಿಟಲ್ ಫ್ಲವರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ದೈಹಿಕ ಶಿಕ್ಷಕರಾಗಿ ಮಕ್ಕಳನ್ನು ಕ್ರೀಡೆಯಲ್ಲಿ ಉತ್ತಮ ಸ್ಥಾನ ಪಡೆಯುವಂತೆ ಕ್ರೀಡಾ ಲೋಕದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದಕ್ಕೆ ಪ್ರೇರಣೆ ಆಗಿದ್ದಾರೆ.ಪ್ರಸ್ತುತವಾಗಿ ಇವರು ಲಿಂಗಸಗೂರಿನ ಸರ್ ಎಂ ವಿಶ್ವೇಶ್ವರಯ್ಯ ಪದವಿ ಪೂರ್ವ ಪಿ ಯು ಕಾಲೇಜ್ ಲಿಂಗಸಗೂರಿನಲ್ಲಿ ದೈಹಿಕ ಶಿಕ್ಷಕ ನಿರ್ದೇಶಕರಾಗಿ ತಾಲೂಕ,ಜಿಲ್ಲಾ,ಹಾಗೂ ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.ಅದೇ ರೀತಿ ಭಾರತ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ಮೂಡುಬಿದರಿಯಲ್ಲಿ ನಡೆದ ಇಂಟರ್ನ್ಯಾಷನಲ್ ಜಾoಬೂರಿಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡು ಅವರು ಸಹ ಭಾಗವಹಿಸಿದ್ದರು.ಎಲ್ಲಾ ಕಾರ್ಯ ಸಾಧನೆಗಳನ್ನು ಗುರುತಿಸಿದ ಹೈದರಾಬಾದಿನ ಸೆಂಟ್ರಲ್ ಫೈನ್ ಆರ್ಟ್ಸ್ ಫೌಂಡೇಶನ್ ಹಾಗೂ ಸ್ನೇಹ ಯುತ್ ಕಲ್ಚರ್ ಅಸೋಸಿಯೇಷನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತ್ಯಾಗರಾಯ ಗಣಸಭಾ ಚಿಕ್ಕಲ್ಲಪಲ್ಲಿ ಹೈದರಾಬಾದ್ ನಲ್ಲಿ ನಡೆದಂತ ಸುಂದರ ಕಾರ್ಯಕ್ರಮದಲ್ಲಿ.ಶ್ರೀ ರೋಯೂರ್ ಶೇಷ ಸಾಯಿ. ಡಾ.ವೇದನಾಥ ನಾಗ ಚಲಪತಿ ರಾವ್ ,ಡಾ.ವನಜ ಉದಯ್,ರಂಜಿತ್ ಕುಮಾರ್ ಎಂ,ಡಾ. ಹುಲಿಗೆಮ್ಮ ಅಮ್ಮನವರು ,ಮೌನದ್ದೀನ್ ಬೂದಿನಾಳ ,ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಶ್ರೀ ಕಿರಣ್ ಕುಮಾರ್ ಇವರಿಗೆ ಸಮಾಜ ಸೇವೆ ಹಾಗೂ ಕ್ರೀಡಾ ರತ್ನ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ಕಿರಣ್ ಕುಮಾರ್ ಇವರಿಗೆ ಸಮಾಜ ಸೇವಾ ಹಾಗೂ ಕ್ರೀಡಾ ರತ್ನ ರಾಷ್ಟ್ರ ಪ್ರಶಸ್ತಿ ಲಭಿಸಿದ್ದಕ್ಕೆ ತಂದೆ ತಾಯಿಗಳು ಹಾಗೂ ಗೆಳೆಯರ ಬಳಗ ಮತ್ತು ಕರ್ನಾಟಕ ಜನ ಜಾಗೃತಿ ಸಮಿತಿಯ ಸದಸ್ಯರು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಎಲ್ಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇವರಿಗೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.

