ಶ್ರೀ ವಿಶ್ವೇಶ್ವರ ಸೇವಾ ಸಮಿತಿ ಗಾಂಧಿನಗರ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀ ರಾಮನಗರ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜ್ ಸಿಂಧನೂರು ಇವರ ಸಂಯುಕ್ತಾಕ್ಷರದಲ್ಲಿ ಉಚಿತ ಹೃದಯ, ನರರೋಗ ಕ್ಯಾನ್ಸರ್ ಮೂತ್ರಪಿಂಡ ಕಲ್ಲು ಕಾಯಿಲೆಗಳ ತಪಾಸಣಾ ಶಿಬಿರ ಗಾಂಧಿನಗರದಲ್ಲಿ ಜರುಗಿತು ಕಾರ್ಯಕ್ರಮವನ್ನು ದೀಪ ಬೆಳಸುವುದರ ಮುಖಾಂತರ ಸಪ್ತಗಿರಿ ಆಸ್ಪತ್ರೆಯ ವೈದ್ಯರುಗಳು ಮತ್ತು ಶ್ರೀ ಭಾಸ್ಕರ್ ರಾವ್ , ಶ್ರೀ ಚಿತ್ತೂರಿ ಶ್ರೀನಿವಾಸ್ ,ಸನ್ ರೈಸ್ ಕಾಲೇಜಿನ ಪ್ರಾಚಾರ್ಯರಾದ ಲಾಜರ್ ಸಿರಿಲ್ ಜಿ ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಿದರು ಸಪ್ತಗಿರಿ ಆಸ್ಪತ್ರೆಯ ವೈದ್ಯರುಗಳು ಇಂತಹ ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡುವುದು ನಮಗೆ ಸಂತೋಷವನ್ನು ನೀಡುತ್ತದೆ ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ನ ಪ್ರಾಚಾರ್ಯರಾದ ಲಾಜರ್ ಸಿರಿಲ್ ಅವರು ಮಾತನಾಡಿ ಸಪ್ತಗಿರಿಯ ಆಸ್ಪತ್ರೆಯ ವೈದ್ಯರುಗಳ ಸೇವೆಯನ್ನು ಹಿಂದಿನ ನಾನು ನೋಡಿದ್ದೇನೆ ಅವರು ಅತ್ಯುತ್ತಮ ಸೇವೆಯನ್ನು ಗ್ರಾಮೀಣ ಭಾಗದ ಜನಕ್ಕೆ ನೀಡುವುದರ ಜೊತೆಗೆ ಉಚಿತ ಶಸ್ತ್ರಚಿಕಿತ್ಸೆಗಳನ್ನ ಮಾಡಿ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದ್ದಾರೆ ಎಂದು ತಿಳಿಸಿದರು ಮತ್ತು ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ನ ವಿದ್ಯಾರ್ಥಿಗಳು ಸದಾ ಈತರ ಉಚಿತ ಆರೋಗ್ಯ ತಪಾಸಣೆಗೆ ಸಹಾಯ ನೀಡಲು ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು, ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 200 ರೋಗಿಗಳನ್ನು ತಪಾಸಣೆ ಮಾಡಿ 30 ಇಸಿಜಿ ಹಾಗೂ 25 ಎಕೋ ಪರೀಕ್ಷೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಲಾಯಿತು ಹಾಗೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿಗೆ ರೆಫರ್ ಮಾಡಲಾಯಿತು ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆಯ ಶಿಬಿರ ನೇತೃತ್ವವನ್ನು ಶ್ರೀ ಭಾಸ್ಕರ್ ರಾವ್ ವಹಿಸಿಕೊಂಡಿದ್ದರು ಹಾಗೂ ಚಟ್ಟೂರಿ ಶ್ರೀನಿವಾಸ್ ಇವರು ಸಹ ಅತ್ಯಂತ ಉತ್ಸಾಹದಿಂದ ಉಚಿತ ಆರೋಗ್ಯ ತಪಾಸಣೆಯ ಕೆಲಸ ಕಾರ್ಯಗಳನ್ನು ನಿರ್ವಹಿಸಿದರು ಇದೇ ಸಂದರ್ಭದಲ್ಲಿ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ನ ವಿದ್ಯಾರ್ಥಿಗಳು ಆರೋಗ್ಯ ಯೋಧರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದರು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಗಾಂಧಿನಗರದ ಗುರು ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಚಿತ ತಪಾಸಣಾ ಆರೋಗ್ಯ ಶಿಬಿರವನ್ನು ಯಶಸ್ವಿಗೊಳಿಸಿದರು


