ಸಿರವಾರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾರತದ ವೈವಿಧ್ಯತೆಗೆ ಅನುಗುಣವಾಗಿ ನಡೆಯುವ ಅನೇಕ ಹಬ್ಬಗಳು, ಪ್ರಾದೇಶಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕ್ಯಾಲೆಂಡರ್ ಒಳಗೊಂಡಿದ್ದು, ಗ್ರಾಹಕರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಸಿರಿ ಸಂಜೀವಿನಿ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ಅವರು ಹೇಳಿದರು. ಅವರಿಂದು ಪಟ್ಟಣದ ದೇವದುರ್ಗ ಕ್ರಾಸ್ ಹತ್ತಿರದ ಸಿರಿ ಸಂಜೀವಿನಿ ಸೌಹಾರ್ದ ಸಹಕಾರಿ ಸಂಘದ ಸೌಹಾರ್ದ ಸಹಕಾರಿಯ 2026 ನೂತನ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು. ನಾಡಿನ ಹಬ್ಬ ಹರಿದಿನಗಳು, ಜಾತ್ರೆಗಳು, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ.ಕ್ರಿಸ್‌ಮಸ್,ಸರ್ಕಾರಿ ರಜೆ ದಿನಗಳ ಮಾಹಿತಿ, ದಾರ್ಶನಿಕರ ಜಯಂತಿಗಳು, ಇವುಗಳ ದಿನಾಂಕ ಮೊದಲೇ ನಿಗದಿಪಡಿಸಿರುವುದರಿಂದ ದೀರ್ಘ ವಾರಾಂತ್ಯಗಳು ಅಥವಾ ಹಬ್ಬದ ರಜಾ ದಿನಗಳಲ್ಲಿ ರಜೆಗಳು, ಪ್ರವಾಸಗಳು ಅಥವಾ ಕುಟುಂಬ ಕಾರ್ಯಕ್ರಮಗಳನ್ನು ಯೋಜಿಸಬಹುದಾಗಿದೆ ಸುತ್ತಮುತ್ತಲಿನ ಜಾತ್ರೆಗಳು ಕೂಡ ಅಳವಡಿಸಲಾಗಿದೆ. ಮುಂಜಾಗ್ರತೆ ಪಡೆಯಲು ಮತ್ತು ತಿಳಿಯಲು ಕ್ಯಾಲೆಂಡರ್ ಮತ್ತು ಪಂಚಾಂಗಗಳು ಪ್ರತಿಯೊಬ್ಬರೆ ಬದುಕಿನಲ್ಲಿ ಅತ್ಯವಶ್ಯಕವಾಗಿವೆ. 2026 ನೂತನೆ ಹೊಸ ವರ್ಷ ಸರ್ವರಿಗೂ ಸುಖಶಾಂತಿ ಸಮೃದ್ಧಿ ತರಲಿ ಎಂದರು. ಇದೇವೇಳೆ ನೂತನ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಿರಿಸಂಜೀವಿನ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯ ಕರಾದ ಗಣೇಕಲ್ ವಿರೇಶ್ ನಿರ್ದೇಶಕರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ವೈ.ಭೂಪನ ಗೌಡ, ಶಿವಶರಣ ಸಾಹುಕಾರ ಅರಿಕೇರಿ, ಶರಣಪ್ಪ, ಮಲ್ಲಣ್ಣ ಸಾಹುಕಾರ, ಪವನ್ ದರ್ಶನಕ ರ್, ಮಲ್ಲಿಕಾರ್ಜುನ ಚನ್ನೂರು, ಮಾಜಿ ಸೈನಿಕ ಮಲ್ಲಿಕಾರ್ಜುನ, ಬ್ಯಾಂಕ್ ಸಿಬ್ಬಂದಿ ಮಹೇಶ್, ಸೇರಿದಂತೆ “ ನಿರ್ದೇಶಕರು ಸಿಬ್ಬಂದಿಯವರು ಇದ್ದರು.

