ಸಿಂಧನೂರು: ಡಿ17 ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ವತಿಯಿಂದ , ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಸಂವಿಧಾನ ಭಾರತ ಕಾರ್ಯಕ್ರಮವನ್ನು ಯಾದಗಿರಿ ಸಾಹಿತಿಗಳಾಗಿ ಡಾ.ಜಯದೇವಿ ಗಾಯಕವಾಡ ಸಮ್ಮೇಳನದ ಸರ್ವಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿದೆಂದು ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ತಿಳಿಸಿದರು.
ಬುದುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ಸಮ್ಮೇಳನ
ರಾಯಚೂರಿನ ಸಿದ್ದರಾಮಜಂಬಲದಿನ್ನಿ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 20 ಮತ್ತು 21 ರಂದು ನಡೆಯಲಿದ್ದು, ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು ಪ್ರೊ.ಬರಗೂರು ರಾಮಚಂದ್ರಪ್ಪ ಮಾಡಲಿದ್ದು ಆಶಯಗಳನ್ನು ಡಾ.ಎಲ್.ಹನುಮಂತಯ್ಯ
ನುಡಿಯಲಿದ್ದಾರೆ.ಸಮ್ಮೇಳನದಲ್ಲಿ
ಸಂವಾದ ಗೋಷ್ಠಿಗಳು ನಡೆಯಲಿವೆ ಮತ್ತು ರಾಷ್ಟ್ರೀಯ ಗೌರವ ಪ್ರಶಸ್ತಿ ವಿಶೇಷ ಗೌರವ ಕುಮಾರ ತಾನೀಶ ಕೋಲಾರ ಭಾಜನರಾಗಿದ್ದಾರೆ. ಯುವಕರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಪ್ರಧಾನ ಕಾರ್ಯದರ್ಶಿ ರಾಮಣ್ಣ ಬೇರ್ಗಿ, ಉಪಾಧ್ಯಕ್ಷರಾದ ಆರುಣ ಕುಮಾರ ಬೇರ್ಗಿ,ಎಚ್.ಎಫ್ ಮಸ್ಕಿ,ಜಿಲ್ಲಾ ಉಪಾಧ್ಯಕ್ಷ ಡಾ.ಬಸವರಾಜ ಪಿ.ವಿರೇಶ ಕನ್ನಾರಿ, ಮೌನೇಶ್ ಜಾಲವಾಡಗಿ ಯರಿಯಪ್ಪ ಬೆಳಗುರ್ಕಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *