ಮಾನ್ವಿ: ಪಟ್ಟಣದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕದ ಕಾರ್ಯಾಲಯದಲ್ಲಿ ಅ.ಖಿ.ಭಾ.ವೀ.ಲಿಂ.ಮಹಾಸಭಾದ ತಾಲೂಕ ಘಟಕದವತಿಯಿಂದ ಇತ್ತಿಚಿಗೆ ನಿಧನರಾದ ಅ.ಖಿ.ಭಾ.ವೀ.ಲಿಂ.ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಲಿಂ. ಡಾ. ಶಾಮನೂರ ಶಿವಶಂಕರಪ್ಪ ಹಾಗೂ ಮಾನ್ವಿ ತಾಲೂಕಿನ ಅಡವಿ ಅಮರೇಶ್ವರ ಮಠದ ಲಿಂ. ಶ್ರೀ ಶಾಂತಮಲ್ಲ ಮಹಾಸ್ವಾಮಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿ ಅ.ಖಿ.ಭಾ.ವೀ.ಲಿಂ.ಮಹಾಸಭಾದ ತಾಲೂಕ ಅಧ್ಯಕ್ಷರಾದ ಅರುಣ್ ಚಂದಾ ಮಾತನಾಡಿ ಅ.ಖಿ.ಭಾ.ವೀ.ಲಿಂ.ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಲಿಂ. ಡಾ. ಶಾಮನೂರ ಶಿವಶಂಕರಪ್ಪ ನವರು ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಸಂಘಟಿಸಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಿದ್ದರೆ ಅವರನ್ನು ವೀರಶೈವ ಲಿಂಗಾಯತ ಸಮಾಜ ಕಳೆದುಕೊಂಡAತಾಗಿದೆ ತಾಲೂಕಿನಲ್ಲಿನ ಅಡವಿ ಅಮರೇಶ್ವರ ಮಠದ ಲಿಂ. ಶ್ರೀ ಶಾಂತಮಲ್ಲ ಮಹಾಸ್ವಾಮಿಗಳು ಸಮಾಜ ಮುಖಿ ಕಾರ್ಯಗಳ ಮೂಲಕ ತಾಲೂಕಿನಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ,ಸಾಹಿತ್ಯಿಕವಾಗಿ ಸಮಾಜಿಕ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದು ನುಡಿನಮನದಲ್ಲಿ ತಿಳಿಸಿದರು.
ಸಭೆಯಲ್ಲಿ ಬಣಜಿಗ ಸಮಾಜದ ತಾಲೂಕಾಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಗಣೇಕಲ್, ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ್ ,ಪದಾಧಿಕಾರಿಗಳಾದ ಶ್ರೀಧರ್ ಸ್ವಾಮಿ ಕೊಟ್ನೆಕಲ್, ವೀರನಗೌಡ ಸಂಗಾಪುರ, ಜಗದೀಶ ಓತೂರ, ರೇವಣಸಿದ್ದಯ್ಯ ಸ್ವಾಮಿ, ಪ್ರದೀಪ್ ಪಾಟೀಲ್, ಶರಣಪ್ಪ ಮಾಸ್ಟರ್ ಅ.ಖಿ.ಭಾ.ವೀ.ಲಿಂ.ಮಹಾಸಭಾದ ಪದಾಧಿಕಾರಿಗಳಾದ ಶಿವಲಿಂಗಯ್ಯ ಸ್ವಾಮಿ, ರವಿಕುಮಾರ ಪಾಟೀಲ್ ಚಿಮ್ಲಾಪುರ,ಶರಣಬಸವ, ವಿಶ್ವನಾಥ ಪಾಟೀಲ, ಗುರುಗೌಡ ಕಣ್ಣೂರು,ತಿಪ್ಪಣ್ಣ ಹೊಸಮನಿ,ಶಂಕರಪ್ಪ ನಕ್ಕುಂದಿ,ಮಲ್ಲಭದ್ರಗೌಡ ನೀರಮಾನ್ವಿ, ಜನಾರ್ದನ ಸಾಹುಕಾರ,ದೇವೇಂದ್ರ ಹೂಗಾರ, ಶಿವಕುಮಾರ್ ಪಾಟೀಲ್,ಮಂಜುನಾಥ ಪಾಟೀಲ್, ಮಾಧ್ಯಮ ಸಮಿತಿ ಅಧ್ಯಕ್ಷರಾದ ರಾಜಶೇಖರ ಸ್ವಾಮಿ, ಶರಣಬಸವಹರವಿ, ಶಿವಕುಮಾರಗೌಡ ಹಳ್ಳಿಹೊಸೂರು,ಬಸವರಾಜ ಹರನಳ್ಳಿ ,ಬಸವಂತ ಶೆಟ್ಟಿ, ಶರಣಯ್ಯ ಸ್ವಾಮಿ, ಹೊಯ್ಸಳ ಸ್ವಾಮಿ, ನಾಗರಾಜ, ದರ್ಶನ ಪಾಟೀಲ ಸಂಗಾಪುರ ನಿರ್ಮಲಾ , ಕು.ಶೃತಿ ಪಾಟೀಲ್ ಸೇರಿದಂತೆ ಸಮಾಜದ ಗಣ್ಯರು ಸದಸ್ಯರು ಇದ್ದರು.

Leave a Reply

Your email address will not be published. Required fields are marked *