ಸಿಂಧನೂರು,ಡಿ.17- ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವ ಮೂಲಕ ಪಲ್ಸ್ ಪೋಲಿಯೊ ಅಭಿಯಾನವನ್ನು ಯಶಸ್ವಿಗೊಳಿಸಿ ಎಂದು ತಹಸೀಲ್ದಾರ ಅರುಣ ಹೆಚ್ ದೇಸಾಯಿ ಅಧಿಕಾರಿಗಳಿಗೆ ಸೂಚಸಿದರು.

ತಹಸೀಲ್ದಾರ್ ಕಛೇರಿಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಎರಡನೆಯ ತಾಲೂಕಾ ಮಟ್ಟದ ಟಾಸ್ಕ್ ಪೊರ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದಿನಾಂಕ 21 ರಂದು ಆಯಾ ಗ್ರಾಮ ಪಂಚಾಯತಿ ಪಿಡಿಓ ರವರು ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಹಾಗೂ ಗ್ರಾಮಗಳಲ್ಲಿಯ ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ಮೈಕ್ ಮೂಲಕ ಹಾಗೂ ಡಂಗೂರ ಬಾರಿಸುವ ಮುಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು, ನಗರಸಭೆ ಕಸದ ವಾಹನದ ಮೂಲಕ ಸಹ ಪ್ರಚಾರ ಮಾಡಬೇಕು ಎಂದರು .
ಬಸ ನಿಲ್ದಾಣ. ರೈಲ್ವೆ ಸ್ಟೇಷನ್ ಗಳಲ್ಲಿ ಪೋಲಿಯೊ ಬೂತ ಮಾಡಿ ಮಕ್ಕಳಿಗೆ ಪೋಲಿಯೊ ಹಾಕಬೇಕು ಯಾವ ಮಗು ಸಹ ಪೋಲಿಯೊದಿಂದ ವಂಚಿತರಾಗದಂತೆ ನೋಡಿ ಕೊಳ್ಳುವ ಜವಾಬ್ದಾರಿಯು ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ ಯಾಗಿದೆ ಎಂದರು.
ನಗರದಲ್ಲಿ 33 ಬೂತ್‌, 9 ಸಂಚಾರ ತಂಡಗಳು, 2 ಮೊಬೈಲ್ ತಂಡ ನಗರದ ಕಾರ್ಯನಿರ್ವಹಿಸಲಿದ್ದು ಎಲ್ಲರೂ ಸಹಕರಿಸಿ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ ಅಯ್ಯನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ, ಶ್ರೀ ಲಿಂಗನಗೌಡ್ರು ಶಿಶು ಅಭಿವೃದ್ದಿ ಯೋಜನಾಧಿಕಾರಿ, ಅಶೋಕ, ವೈದ್ಯಾಧಿಕಾರಿ ಡಾ ಮೌನೇಶ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಂಗನಾಥ ಗುಡಿ, ಸಂಗನಗೌಡ ಪಾಟೀಲ. ಕ್ಷೇತ್ರ ಆರೋಗ್ಯ ಶಿಕ್ಷಣಾದಿಕಾರಿ ಗೀತಾ ಹಿರೆಮಠ, ಬಿಪಿಎಮ್‌ ತ್ರಿವೇಣಿ, ಹನುಮಂತ ಮಲ್ಲಪ್ಪ, ಸೇರಿದಂತೆ ಜೇಸ್ಕಾ, ಸಾರಿಗೆ, ಕಾರ್ಮಿಕ ಇಲಾಖೆ ಸಿಬ್ಬಂದಿ, ಪಿಹೆಚ್‌ಸಿಓ ಹಾಗೂ ಇತರರು ‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *