ಮಾನ್ವಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾನ್ವಿ ತಾಲೂಕು ಘಟಕಕ್ಕೆ ಅಧ್ಯಕ್ಷರಾಗಿ ಅಶೋಕ ತಡಕಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ಆಯ್ಕೆಯಾದರು. ಮಾನ್ವಿಯ ಪತ್ರಿಕಾ ಭವನದಲ್ಲಿ ಮಂಗಳವಾರ ಸಂಜೆ ತಾಲೂಕು ಘಟಕಕ್ಕೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ದೇವಪ್ಪ ಬ್ಯಾಗವಾಟ್, ಗೂಳಪ್ಪ ನೀರಮಾನ್ವಿ, ಕಾರ್ಯದರ್ಶಿಯಾಗಿ ಅಜಯಕುಮಾರ್, ಖಜಾಂಚಿಯಾಗಿ ವಿಜಯಕುಮಾರ ಆಯ್ಕೆಯಾದರು. ಇನ್ನೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾರೆಪ್ಪ ದೊಡ್ಡಮನಿ, ಪಿ.ಪರಮೇಶ, ಕೃಷ್ಣಮೂರ್ತಿ ಗುಡಿ, ಈಶಪ್ಪ ಬೈಲ್ ಮರ್ಚೆಡ್, ಚಂದ್ರಶೇಖರ್ ಮದ್ಲಾಪುರ, ಆನಂದ ಸ್ವಾಮಿ, ಶಿವಕುಮಾರ್ ಜಗ್ಲಿ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆ ನಡೆದ ಬಳಿಕ ಜಿಲ್ಲಾಧ್ಯಕ್ಷರಾದ ಆರ್.ಗುರುನಾಥ ಫಲಿತಾಂಶ ಪ್ರಕಟಿಸಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ ಸ್ವಾಮಿ ಕುಕನೂರು, ಜಿಲ್ಲಾ ಉಪಾಧ್ಯಕ್ಷರಾದ ಮಹಾನಂದ ನಾಯಕ, ಸೂಗುರೇಶ ಎಸ್. ಗುಡಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಬೋಗಾವತಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಲಕ್ಷ್ಮಿ ಪ್ರಸನ್ನ ಜೈನ್ , ಲಕ್ಷ್ಮಣ ಕಪಗಲ್, ತಾಯಪ್ಪ ಬಿ.ಹೊಸೂರು ಸೇರಿದಂತೆ ಅನೇಕರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *