ನೈಜ್ಯ ದೆಸೆ : ಲಿಂಗಸಗೂರು ಡಿ 17.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷರಾಗಿ ಶಿವರಾಜ್ ಕೆಂಭಾವಿ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ನಾಯಕ ಅವಿರೋಧ ಆಯ್ಕೆಯಾಗಿದ್ದಾರೆ . ಲಿಂಗಸಗೂರು ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ತಾಲೂಕು ಘಟಕದ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಡಾ.ಶರಣಪ್ಪ ಆನೆಹೊಸೂರು, ಡಿ.ಜಿ.ಶಿವು ಪಟ್ಟಿ, ರಾಘವೇಂದ್ರ ಭಜಂತ್ರಿ, ಕಾರ್ಯದರ್ಶಿಯಾಗಿ ಶಶಿಧರ ಕಂಚಿಮಠ ಮುದಗಲ್, ಸುನಿಲ್ ಕುಮಾರ ಹಟ್ಟಿ ಹಾಗೂ ಖಜಾಂಚಿಯಾಗಿ ನಾಗರಾಜ ಮಸ್ಕಿ ಅವಿರೋಧವಾಗಿ ಆಯ್ಕೆಯಾದರು. ಇನ್ನೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೊಹಿನುದ್ದಿನ್ ಭಂಡಾರಿ, ಚಂದ್ರಶೇಖರ ನಾಯಕ, ನಾಗರಾಜ್ ಮಡಿವಾಳರ್ ಹನುಮಂತ ಕನ್ನಾಳ, ಅರುಣಕುಮಾರ, ರಾಜೇಶ ಮಾಣಿಕ, ಬಸವರಾಜ ಆಶೀಹಾಳ ಅವಿರೋಧವಾಗಿ ಆಯ್ಕೆಯಾದರು. ಅವಿರೋಧ ಆಯ್ಕೆ ನಡೆದ ಬಳಿಕ ಜಿಲ್ಲಾಧ್ಯಕ್ಷರಾದ ಆರ್.ಗುರುನಾಥ ಫಲಿತಾಂಶ ಪ್ರಕಟಿಸಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು.

