ಕವಿತಾಳ : ಡಿ 16 – ಮಸ್ಕಿ ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಗಮರಹಳ್ಳಿ ಶಾಲೆಯ ಹಳೆ ಕಟ್ಟಡ ನೆಲಸಮ ಮಾಡಿ ಅದೇ ಜಾಗದಲ್ಲಿ ಹೊಸದಾಗಿ ಅಂಗನವಾಡಿ ಕಟ್ಟಡ ಆರಂಭ ಮಾಡಿದ್ದು ಅದಕ್ಕೆ ಶಾಲಾ ಎಸ್ ಡಿ ಎಮ್ ಸಿ ಅದ್ಯಕ್ಷ ತಿರುಪತಿ ಯವರು ಆರೋಪ ಮಾಡಿದ್ದಾರೆ,ಹಳೆ ಕಟ್ಟಡ ನೆಲಸಮ ಮಾಡಬೇಕಾದರೆ ಲೋಕೋಪಯೋಗಿ ಇಲಾಖೆಯ ಅನುಮತಿ,ಹಾಗೆ ಶಾಲೆಯ ಎಸ್ ಡಿ ಎಮ್ ಸಿ ಪದಾಧಿಕಾರಿಗಳು ಮತ್ತು ಮುಖ್ಯಗುರುಗಳ ಅನುಮತಿ ಬೇಕು. ಇಷ್ಟೆಲ್ಲ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಬರಿ ಪಿಡಿಒ, ಸದಸ್ಯರು, ಸಿ ಆರ್ ಪಿ ಅವರಿಗೆ ಮೌಖಿವಾಗಿ ಹೇಳಿದಿವಿ,ಮಾತಾಡಿದಿವಿ ಎಂಬ ಉಂಬತನದಿಂದ ಹಳೆ ಶಾಲಾ ಕಟ್ಟಡ ನೆಲಸಮ ಮಾಡಿ ಇವಾಗ ಅಂಗನವಾಡಿ ಕಟ್ಟಡ ಆರಂಭ ಮಾಡಿದ್ದು ಯಾವ ನಿಯಮ,ಲಿಖಿತವಾಗಿ ಒಂದು ಪರವಾನಗಿ ಪತ್ರ ಯಾರು ಹತ್ತಿರ ಇಲ್ಲ ಇದು ಶಿಕ್ಷಣ ಇಲಾಖೆಯ ಯಡವಟ್ಟು,ಈ ಬಗ್ಗೆ ಕ್ಷೇತ್ರ ಶಿಕ್ಷಾಧಿಕಾರಿಗಳು ಮಾನ್ವಿ , ಸ್ಥಳೀಯ ಸಿ ಆರ್ ಪಿ ಪ್ರಶಾಂತಗೌಡ ಅವರಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಬಗ್ಗೆ ಮಾಹಿತಿ ಇಲ್ಲ ಇಂತಹ ನಿರ್ಲಕ್ಷ್ಯ ಅಧಿಕಾರಿಗಳು ಏಕೆಬೇಕು, ಹಾಗೆ ಜೆಇ ವೆಂಕಟೇಶ ಸಹ ಶಾಲೆಗೆ ಮಾಹಿತಿ ತಿಳಿಸದೆ ತಮ್ಮ ಆಸ್ತಿಯಂತೆ ಶಾಲಾ ಕಟ್ಟಡ ನೆಲಸಮ ಮಾಡಿ ಅಂಗನವಾಡಿ ಕಟ್ಟಡ ಆರಂಬಿಸಿದ್ದು,ಈ ಬಗ್ಗೆ ಮಾಹಿತಿ ಸಂಬಂಧ ಕರೆ ಮಾಡಿದರೆ ಸಂಪರ್ಕಕ್ಕೆ ಬರಲಿಲ್ಲ ಅದಕ್ಕೆ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಎಸ್ಡಿಎಮ್ಸಿ ಅದ್ಯಕ್ಷ ತಿರುಪತಿ ಯವರು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜೆಇ ವೆಂಕಟೇಶ ಬೇಜವವ್ದಾರಿ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಆರೋಪ ಮಾಡಿದ್ದಾರೆ.

