ಮಾನ್ವಿ: ಡಿ 16 – ತಾಲೂಕಿನ ಚಿಕಲಪರ್ವಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ,ಮದ್ಲಾಪುರ್ ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿ ಕಾರ್ಮಿಕರಿಗಾಗಿ ಅಯೋಜಿಸಲಾದ ಉಚಿತ ಆರೋಗ್ಯ ಶಿಬಿರ ಅಭಿಯಾನಕ್ಕೆ ಸಮುದಾಯ ಆರೋಗ್ಯ ಅಧಿಕಾರಿ ಪಾಂಡುರAಗ ಚಾಲನೆ ನೀಡಿ ಮಾತನಾಡಿ ವಾತಾವರಣದಲ್ಲಿ ಚಳಿ ಹೆಚ್ಚಾಗಿರುವುದರಿಂದ ಕೂಲಿ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯವಾಗಿದೆ ಪ್ರತಿಯೊಬ್ಬರು ಕೂಡ ಬಿಸಿ ನೀರನ್ನು ಕುಡಿಯಬೇಕು ಜ್ವರ ,ಕೆಮ್ಮು,ಕಫ,ನೆಗಡಿಯಂತಹ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರಿಂದ ಆರೋಗ್ಯ ತಾಪಸಣೆ ಮಾಡಿಸಿಕೊಂಡು ಅಗತ್ಯ ಚಿಕಿತ್ಸೆಯನ್ನು ಪಡೆಯಬೇಕು ಎಂದು ತಿಳಿಸಿದರು.
ತಾಲೂಕ ಐ.ಇ.ಸಿ. ಸಂಯೋಜಕರಾದ ಈರೇಶ ಮಾತನಾಡಿ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ದಿನದ ಕೂಲಿದರವನ್ನು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ 370 ರೂಗೆ ಹೆಚ್ಚಿಸಲಾಗಿದೆ. ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತರಿ ಹಾಗೂ ಸ್ತ್ರೀ ಚೇತನ ಅಭಿಯಾನದಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ 100 ದಿನ ಕೂಲಿ ಕೆಲಸವನ್ನು ಅವರ ಗ್ರಾಮ ವ್ಯಾಪ್ತಿಯಲ್ಲಿಯೇ ನೀಡಲಾಗುವುದು ಒಂದು ಕುಟುಂಬವು ವರ್ಷದಲ್ಲಿ ನೂರು ದಿನ ಕೆಲಸವನ್ನು ಮಾಡುವ ಮೂಲಕ 37 ಸಾವಿರರೂಗಳ ಕೂಲಿಯ ಹಣವನ್ನು ಪಡೆದುಕೊಳ್ಳಬಹುದಾಗಿದೆ ಸಾಮಾಜಿಕ ಭದ್ರತೆ ಕಲ್ಪಿಸಲು ನರೇಗಾ ಯೋಜನೆಯಡಿಯಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ, ಗರ್ಭಿಣಿ ಮಹಿಳೆಯರಿಗೆ ಶೇ 50ರಷ್ಟು ಕೆಲಸ ಮಾಡಿದರೂ ಕೂಡ ಪೂರ್ತಿ ಪ್ರಮಾಣದ ಕೂಲಿಯನ್ನು ನೀಡಲಾಗುವುದು ,ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಶಿಶು ಪಾಲನಾ ಕೇಂದ್ರದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ .ನರೇಗಾ ಕೂಲಿ ಕಾರ್ಮಿಕರು ಎನ್.ಎಂ.ಎA.ಎಸ್ ಹಾಜರಾತಿಯನ್ನು ಎರಡು ಬಾರಿ ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು.
ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ಶಿಬಿರದಲ್ಲಿ ರಕ್ತದೋತ್ತಡ, ಮಧುಮೇಹ , ಕಫ ಪರೀಕ್ಷೆ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು ಹಾಗೂ ಮಾತ್ರೆಗಳನ್ನು ವಿತರಿಸಲಾಯಿತು. ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು,
ಕಾರ್ಯಕ್ರಮದಲ್ಲಿ ಸಮುದಾಯ ಸುರಕ್ಷಾಧಿಕಾರಿ ಮಂಜುಳಾ, ಆರೋಗ್ಯ ನಿರಕ್ಷಣಾಧಿಕಾರಿ ಚಿದಾನಂದಪ್ಪ ಬಿ.ಎಫ್.ಟಿ. ಮಹಮ್ಮದ್‌ಸಾಬ್ , ಫಾತಿಮಾ ,ಆಶಾ ಕಾರ್ಯಕರ್ತೆಯರು ಹಾಗೂ ಕೂಲಿ ಕಾರ್ಮಿಕರು ಭಾಗವಹಿಸಿದರು.
