ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ ರವರ ಸೂಚನೆ ಮೇರೆಗೆ ಇಂದು ಡಿ 16 ರಂದು ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಬರುವ ಅಕ್ವಟೇಟ್‌ಗಳ ರಿಪೇರಿ, ವನ್ನೆಫ್‌ಗಳ ರಿಪೇರಿ ಹಾಗೂ ಹೊಸ ಕಟ್ಟಡಗಳ ಕಟ್ಟುವುದು, ಪಾಪಯ್ಯ ಸುರಂಗ ಮಾರ್ಗದ ಅಗಲೀಕರಣ ಮತ್ತು ಮುಖ್ಯ ಕಾಲುವೆಯ ಲೈನಿಂಗ್ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಈ ಬೇಸಿಗೆಯಲ್ಲಿ ಕಾಮಗಾರಿಗಳನ್ನು ಚಾಲನೆ ಕೊಡುವ ಸಂಬಂಧ ಉನ್ನತಮಟ್ಟದ ಹಿರಿಯ ನೀರಾವರಿ ಇಲಾಖೆ, ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ1. ಶ್ರೀ ಚಂದ್ರಶೇಖರ ಸರ್ಕಾರದ ಕಾರ್ಯದರ್ಶಿ (ನಿವೃತ್ತ)2. ಮಾಧವ ಮುಖ್ಯ ಅಭಿಯಂತರರು (ನಿವೃತ್ತ) 3. ಕೆ.ಮೋಹನ್ ಮುಖ್ಯ ಅಭಿಯಂತರರು4. ಮಂಜಪ್ಪ ಎಸ್.ಹೆಚ್.ಮುಖ್ಯಅಭಿಯಂತರರು (ನಿವೃತ್ತಿ)5. ಕೆ.ಕೆ.ಹಾವರ್ಗಿ, ಟನಲ್ ತಜ್ಞರು ಕಾರ್ಯಪಾಲಕ ಅಭಿಯಂತರರು (ನಿವೃತ್ತ)6. ಉಮೇಶ ವಿ.ಹೆಗಡೆ ಭೂವಿಜ್ಞಾನಿ ತಜ್ಞರು ಜನರಲ್ ಮ್ಯಾನೇಜರ್ (ನಿವೃತ್ತ) ಎನ್.ಎಚ್.ಪಿ.ಎಲ್.7. ಆರ್.ಕೆ. ಜಯಗೋಪಾಲ್ Geotecnical and Rehabillition ತಜ್ಞರು,8. Representative, Hatti Gold Mines,9.ಎಸ್.ಬಿ ಮಲ್ಲಿಗವಾಡ, ಅಧೀಕ್ಷಕ ಅಭಿಯಂತರರು ತುಂಗಾಭದ್ರಾ ಯೋಜನಾ ವೃತ್ತ ಮುನಿರಾಬಾದ್ರಾಜ್ಯ ಸರ್ಕಾರ ಮೇಲ್ಕಾಣಿಸಿದ 09 ಜನರ ಆಧಿಕಾರಿಗಳ ತಂಡ ನೇಮಕ ಮಾಡಿ 02 ದಿನಗಳ ಕಾಲ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಮೇಲಿನ ಎಲ್ಲಾ ಕಾಮಗಾರಿಗಳ ವೀಕ್ಷಣೆ ಮಾಡಿ 07 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಎಂದು ಹಂಪನಗೌಡ ಬಾದರ್ಲಿ ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


