ಕವಿತಾಳ : `ಸಾಮೂಹಿಕ ವಿವಾಹದಿಂದ ಬಡ ಕುಟುಂಬಗಳಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ’ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರವಿಹಾಳ  ಹೇಳಿದರು.
ಸಮೀಪದ ಮಲ್ಲದಗುಡ್ಡ ಗ್ರಾಮದ ಆರೂಢ ಅಯ್ಯಪ್ಪ ತಾತನವರರ 44ನೇ ಮತ್ತು ಆರೂಢ ಕರಿಬಸವಸ್ವಾಮೀಜಿಯ 10ನೇ ಪುಣಗಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಸಾಮೂಹಿಕ ವಿವಾಹ ಏರ್ಪಡಿಸಿ, ಬಡ ಕುಟುಂಬಗಳಿಗೆ ಅನುಕೂಲ ಕಲ್ಪಿಸುವುದು, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಪುರಸ್ಕರಿಸುವ ಆರೂಢಮಠದ ಸಂಪ್ರದಾಯ ಶ್ಲಾ್ಯಘನೀಯ’ ಎಂದರು
ಗಲಗ ಮಠದ ಗಂಗಾಧರ ತಾತನವರು, ಯರಮರಸ್‌ನ ಕಲಿಗಣನಾಥ ಸ್ವಾಮೀಜಿ, ಆರೂಢ ಅಯ್ಯಪ್ಪ ತಾತನವರು, ಅಬ್ಬಾಸ್ ಅಲೀ ತಾತನವರು ಗ್ವಾನವಾರ, ಮುಖಂಡ ಮಲ್ಲಿಕಾರ್ಜುಜ ಪಾಟೀಲ್ ಯದ್ದ÷್ಲದಿನ್ನಿ, ಬಿಜೆಪಿ ಮುಖಂಡ ಪ್ರಸನ್ನ ಪಾಟೀಲ್ಮತ್ತಿತರರು ಉಪಸ್ಥಿತರಿದ್ದರು.ವಿವಾಹ ಸಮಾರಂಭದಲ್ಲಿ ೧೧ ಜೋಡಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಭಕ್ತರಿಂದ ಆರೂಢ ಅಯ್ಯಪ್ಪ ತಾತನವರ ತುಲಾಭಾರ ನೆರವೇರಿಸಲಾಯಿತು.

Leave a Reply

Your email address will not be published. Required fields are marked *