ಕವಿತಾಳ :-ಶಾಲಾ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಪ್ರತಿಭಾ ಕಾರಂಜಿ ತುಂಬಾ ಮುಖ್ಯವೆಂದು ಕವಿತಾಳ ವಲಯದ ಸಂಪನ್ಮೂಲ ಅಧಿಕಾರಿ ಸೌಮ್ಯಶ್ರೀ ಹೇಳಿದರು.ಜಿಪಂ. ರಾಯಚೂರು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಯಚೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಾನ್ವಿ ಕ್ಷೇತ್ರಸಮನ್ವಯಾಧಿಕಾರಿಗಳ ಕಾರ್ಯಾಲಯ ಮಾನ್ವಿ, ಸಮೂಹ ಸಂಪನ್ಮೂಲ ಕೇಂದ್ರ ಕವಿತಾಳ ಇವರ ಸಹಯೋಗದಲ್ಲಿ ನವಚೇತನ ಅನುದಾನಿತ ಪ್ರಾಥಮಿಕ ಶಾಲಾ ಅವರಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಅವರು ಸಿರವಾರ ತಾಲೂಕಿನ ಕವಿತಾಳ ವಲಯದಲ್ಲಿ 28ಕ್ಕೂ ಹೆಚ್ಚು ಪ್ರಾಥಮಿಕ, ಪ್ರೌಢಶಾಲೆ, ಅನಿದಾನಿತ, ಅನುದಾನರಹಿತ ಶಾಲೆಗಳು ಒಳಗೊಂಡಿರುತ್ತವೆ. ಹೀಗಾಗಿ ಕರ್ನಾಟಕ ಸರ್ಕಾರವೂ 2002 ಇಸ್ವಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಜಾರಿ ಮಾಡಿದೆ. ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳಾದ ಸಂಗೀತ, ಚಿತ್ರಕಲೆ, ನೃತ್ಯ ಮಿಮಿಕ್ರಿ, ಕೈಯಿಂದ ಮಾದರಿ ತಯಾರಿ,ಭಾಷಣ,ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ ಇನ್ನಿತರ ಭಾಷಾಕೌಶಲ್ಯಗಳನ್ನು ಗುರ್ತಿಸುವುದೇ ಪ್ರತಿಭಾ ಕಾರಂಜಿ ಮುಖ್ಯಉದ್ದೇಶವೆಂದು ಹೇಳಿದರು. ವಂ. ಫಾದರ್ ಆರೋಗ್ಯದಾನಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದರು. ಆರಿಫ್ ಮಿಯಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿರವಾರ, ಜಾವಿದ್ ಪಾಷಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿರವಾರ, ಮೌನೇಶ ಹಣಗಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿರವಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಂದರ್ಭದಲ್ಲಿ ಚೌರಮ್ಮ ಮುಖ್ಯೋಪಾಧ್ಯಾಯನಿ ನವಚೇತನ ಅನುದಾನಿತ ಪ್ರಾಥಮಿಕ ಶಾಲೆ, ಯೇಸುಮಿತ್ರ ಎಸ್ ಸಿ ನೌಕರರ ಸಂಘದ ಅಧ್ಯಕ್ಷ ಸಿರವಾರ, ಪಪಂ. ಅಧಿಕಾರಿ ರಾಘವೇಂದ್ರ ಮುತಾಲಿಕ, ಮುಖ್ಯಗುರುಗಳಾದ ಸೋಮಶೇಖರ್ ಮಲ್ಲದಗುಡ್ಡ ಅಯ್ಯನಗೌಡ,ಅಮರೇಶ ಪಾಟೀಲ ಹಣಗಿ,ಮಲ್ಲಿಕಾರ್ಜುನ ಶಿಕ್ಷಕರಾದ ಹುಲ್ಲಪ್ಪಗಂಟಿ, ಹನುಮೇಶ ಮಡಿವಾಳ, ಸುದರ್ಶನ, ಮಹಾಂತೇಶ,ಹಾಗೂ ಕವಿತಾಳ ಸಿ ಆರ್ ಸಿ ವಲಯದ ಶಾಲಾ ಶಿಕ್ಷಕ ಶಿಕ್ಷಕಿಯರು ಶಾಲಾ ಮಕ್ಕಳು ಸೇರಿದಂತೆ ಇತರಿದ್ದರು.

