ಮಸ್ಕಿ : ಮಸ್ಕಿ ತಾಲೂಕಿನ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಎಡರೇಷನ್ ಮಸ್ಕಿ ಘಟಕದ ವತಿಯಿಂದ ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳಿಗೆ ನೂರಾರು ನೋಟು ಬುಕ್ಕುಗಳನ್ನು ವಿಚಾರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರಚಾರ್ಯ ಅವರು ನಮ್ಮ ಭಾಗದಲ್ಲಿ ಅಭಿನಂದನ್ ಸ್ಪೂರ್ತಿ ಧಾಮವು ಹಲವಾರು ಮಕ್ಕಳಿಗೆ ಆಸರೆಯಾಗಿದೆ ಹಾಗೂ ಶಿಕ್ಷಣದಿಂದ ವಂಚಿತ ಮಕ್ಕಳ ಶಿಕ್ಷಣಕ್ಕೆ ಇವರು ನೀಡುತ್ತಿರುವ ಸೇವೆಯು ಮಸ್ತಿಗೆ ಒಂದು ಮಾದರಿಯಾದ ಸೇವೆಯಾಗಿದೆ ಎಂದು ಹೇಳಿದರು.

ಅಶೋಕ ಠಾಕೂರ್ ಮಾತನಾಡಿ ಅಭಿನಂದನ ಸಂಸ್ಥೆಯ ಎಲ್ಲಾ ಸೇವ ಕಾರ್ಯಗಳು ಜನಪರ ಸಮಾಜಪರ ಆಗಿದೆ ಎಂದರು ಅದಕ್ಕಾಗಿ ಈ ಆಶೀರ್ವಾದ ಮಕ್ಕಳಿಗೆ ನಮ್ಮ ಸಂಘದಿಂದ ನೋಟು ಬುಕ್ ಗಳನ್ನು ವಿಸ್ತರಿಸುತ್ತೇವೆ ಹಾಗೂ ಎಲ್ಲರೂ ತನು ಮನ ಧನದಿಂದ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಪಿಲ್ಲಿ ರಾಮರಾವ್, ಪುರೋಹಿತ ಸಂಘದ ಅಧ್ಯಕ್ಷರಾದ ಹನುಮೇಶಾಚಾರ್ಯ, ಸಂಘಟನಾ ಕಾರ್ಯದರ್ಶಿ ವಿರನಾರಾಯಣ ಪೂಜಾರಿ ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *