ದೇವದುರ್ಗ: ಮಕ್ಕಳ ಅಭಿಪ್ರಾಯಕ್ಕೆ ಅವಕಾಶ ಮತ್ತು ಮನ್ನಣೆ ನೀಡಿ ಅವರು ಕೇಳುವ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿ ಮಕ್ಕಳ ಕಲಿಕೆಗೆ ಉತ್ತೇಜನ ಹಾಗೂ ಕಲಿಕೆಗೆ ಪೂರಕ ವಾತಾವರಣವನ್ನ ಕಲ್ಪಿಸುವ ಪ್ರಮುಖ ಅಂಶವೇ ಈ ಗ್ರಾಮ ಸಭೆಯ ಉದ್ದೇಶವಾಗಿದೆ ಎಂದು ಮುಷ್ಟೂರು ಗ್ರಾಮ ಪಂಚಾಯತ ಅಧ್ಯಕ್ಷ ಧನಂಜಯ ಶಿವಂಗಿ ಹೇಳಿದರು.ಅವರು ಗ್ರಾಮ ಪಂಚಾಯತ ಕಾರ್ಯಾಲಯ ಮುಷ್ಟೂರು ಹಾಗೂ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ ಹಾಗೂ ಸರ್ಕಾರಿ ಪ್ರೌಢ ಶಾಲೆ ಶಿವಂಗಿಯಲ್ಲಿ ಆಯೋಜಿಸಲಾಗಿದ್ದ ಹಕ್ಕುಗಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿ ಮಕ್ಕಳ ಕಲಿಕೆ ಮತ್ತು ಸಮಸ್ಯೆಗಳನ್ನು ಗುರುತಿಸಿ ಅವರು ಹೇಳುವ ಪ್ರತಿಯೊಂದು ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹಾರವನ್ನ ಒದಗಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ತದನಂತರ ಸಂಪನ್ಮೂಲ ವ್ಯಕ್ತಿ ಸಿದ್ದಲಿಂಗಪ್ಪ ಕಾಕರಗಲ್ ಮಾತನಾಡಿ ಪ್ರಸ್ತುತ ಶೈಕ್ಷಣಿಕ ಅವಧಿಯಲ್ಲಿ ಮಕ್ಕಳ ಗುಣಾತ್ಮಕ ಶಿಕ್ಷಣದ ಕಡೆ ಗಮನಹರಿಸಿ ಯಾವುದೇ ಮಗು ಶಾಲೆಯಿಂದ ಹೊರಗೊಳಿಯದನೆ ಮತ್ತು ಬಾಲ್ಯ ವಿವಾಹ ಪದ್ದತಿಯಿಂದ ಮಕ್ಕಳನ್ನು ರಕ್ಷಿಸುವ ಅವರ ಹಕ್ಕುಗಳನ್ನು ಅನುಭವಿಸಲು ಉತ್ತಮವಾದ ವೇದಿಕೆಗಳನ್ನು ಕಲ್ಪಿಸುವುದರ ಮೂಲಕ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನಾವೆಲ್ಲರೂ ಅವಕಾಶ ನೀಡುತ್ತಾ, ಯಾವುದೇ ಮಗು ಶಿಕ್ಷಣದಿಂದ ವಂಚಿತನಾಗದೆ ಅವರ ಹಕ್ಕನ್ನು ಪಡೆಯುವಂತೆ ಪ್ರೇರಣೆ ನೀಡುವ ಜವಾಬ್ದಾರಿ ಸ್ಥಳೀಯ ಸರ್ಕಾರದ ಮೇಲಿದೆ ಎಂದರು.
ಮುಸ್ಟೂರೂ ಗ್ರಾಮ ಪಂಚಾಯತಯ ವ್ಯಾಪ್ತಿಯಲ್ಲಿ ಬರುವಂತಹ ಶಾಲೆಗಳಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಂತಲ ಕುಂಟ ಮುಷ್ಟೂರ್ ಶಿವಂಗಿ ಪಿಲಿಗುಂಡ ತೆಗ್ಗಿಹಾಳ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಾದ ಧರ್ಮ ನಾಯಕ್ ತಾಂಡ ,ಆಲ್ದರ್ತಿ, ಗೆಜ್ಜೆ ಬಾವಿ,ಶಾಖಾಪುರ್ ಜರದ ಬಂಡಿ, ಹುನಗುಂದ ಬಾಡ, ಗಲಿಗಿನವರದೊಡ್ಡಿ ಶಾಲೆಯ ಮಕ್ಕಳು ತಮ್ಮ ಸಮಸ್ಯೆಗಳನ್ನು ವೇದಿಕೆಯ ಮುಖಂಡರ ಮುಂದೆ ಹಂಚಿಕೊಂಡರು.
ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಅಂಶಗಳಾದ ಪ್ರತ್ಯೇಕ ಶೌಚಾಲಯಗಳು ಕುಡಿಯುವ ನೀರು ಮೈದಾನ ಸಮತಟ್ಟು ಬಸ್ಸಿನ ಸೌಕರ್ಯಗಳು ಹಾಗೂ ಶಿಕ್ಷಕರ ಕೊರತೆ ಶಾಲೆ ಕಟ್ಟಡಗಳ ಕೊರತೆ ಶಾಲೆಗೆ ಹೋಗಲು ದಾರಿಗಳ ದುರಸ್ತಿ ಶಾಲೆಯಿಂದ ಹೋರಗುಳಿದ ಮಕ್ಕಳ ಸಮಸ್ಯೆ ಇನ್ನು ಮುಂತಾದ ಸಮಸ್ಯೆಗಳನ್ನು ಹವಾಲ್ ಗಳ ಮೂಲಕ ಹಂಚಿಕೊಂಡರು.
ಅಂಗನವಾಡಿಗೆ ಸಂಬಂಧಿಸಿದಂತೆ ಶೌಚಾಲಯಗಳ ನಿರ್ಮಾಣ ಆಟಿಕೆ ಸಾಮಾನುಗಳು ಮತ್ತು ಮಕ್ಕಳಿಗೆ ಸಮವಸ್ತ್ರಹೊಸ ಅಂಗನವಾಡಿ ಕೇಂದ್ರಗಳಿಗೆ ಜಾಗವನ್ನು ಗುರುತಿಸುವುದು. ಹೀಗೆ ಹಲವಾರು ಸಮಸ್ಯೆಗಳನ್ನ ಹೇಳಿಕೊಂಡರು ಹಾಗೆಯೇ ಕಳೆದ ವರ್ಷ ಮಾಡಿದ ಉತ್ತಮ ಕೆಲಸ ಕಾರ್ಯದ ಬಗ್ಗೆ ಸ್ಥಳೀಯ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ನಂತರ ಗ್ರಾಮ ಪಂಚಾಯಿತಿಯ ಕರಹೊಸಲಿಗಾರ ರಾಮಚಂದ್ರ ಮಕ್ಕಳಿಗೆ 2025-2026 ಸಾಲಿನಲ್ಲಿ ಕೈಗೊಂಡ ಕ್ರಿಯಾಯೋಜನೆ ವರದಿಯನ್ನು ಮಂಡಿಸಿದರು ನಂತರ ಎಲ್ಲಾ ಮಕ್ಕಳಿಗೆ ಅಭಿನಂದನೆ ಸಲ್ಲಿಸಿ ಬಳಿಕ 10ನೇ ತರಗತಿಯಲ್ಲಿ ಅತ್ಯುನ್ನತ ಸ್ಥಾನಗಳಿಸಿರುವ ಎಲ್ಲಾ ಮಕ್ಕಳಿಗೆ ಬಹುಮಾನವನ್ನು ಕೊಡುದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಧನಂಜಯ ಅವರು ಮಕ್ಕಳಿಗೆ ಉರಿದುಂಬಿಸಿದರು. ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿಶುಭ ಕೋರಿದರು.
ಈ ಸಂದರ್ಭದಲ್ಲಿ ಹನುಮಂತರಾಯ, ಶಾಲಾ ಮುಕ್ಯೋಪಾಧ್ಯಾಯ ಶಿವಜಾತಪ್ಪ, ಸರಕಾರಿ ಪ್ರೌಢ ಶಾಲೆ ಮುಕ್ಯೋಪಾಧ್ಯಾಯ ಆನಂದ ನಾಯಕ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಶೈಲ, ಗ್ರಾಮ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ಮುಷ್ಟೂರು, ಅಂಗನವಾಡಿ ಹಿರಿಯ ಕಾರ್ಯಕರ್ತೆ ಚನ್ನಬಸ್ಸಮ್ಮ ಮುಷ್ಟೂರ್ ಸೇರಿದಂತೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಆಶಾ ಅಂಗನವಾಡಿ ಕಾರ್ಯಕರ್ತರು ಶಾಲಾ ಸಿಬ್ಬಂದಿಗಳು ಹಾಗೂ ಮಕ್ಕಳು ಇದ್ದರು


