ದೇವದುರ್ಗ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದೇವದುರ್ಗ ತಾಲೂಕು ಘಟಕದ ಅಧ್ಯಕ್ಷರಾಗಿ ನರಸಿಂಗ್ ರಾವ್ ಸರ್ಕಿಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ಅಳ್ಳುಂಡಿ ಆಯ್ಕೆಯಾದರು. ದೇವದುರ್ಗ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ರವಿವಾರ ಬೆಳಗ್ಗೆ ತಾಲೂಕು ಘಟಕಕ್ಕೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ನರಸಿಂಗರಾವ್ ಸರ್ಕಿಲ್ , ಬೆಳ್ಳಿಯಪ್ಪ ಬಲ್ಲಿದವ ನಾಮಪತ್ರ ಸಲ್ಲಿಸಿದರೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರವಿಕುಮಾರ ಪಾಟೀಲ್ ಅಳ್ಳುಂಡಿ, ನಾಗರಾಜ್ ತೇಲ್ಕರ್ ನಾಮಪತ್ರ ಸಲ್ಲಿಸಿದ್ದರು. ನರಸಿಂಗರಾವ್ ಸರ್ಕಿಲ್ 16 ಮತಗಳು ಪಡೆದು ಆಯ್ಕೆಯಾದರೆ, ಬೆಳ್ಳಿಯಪ್ಪ 11 ಮತಗಳನ್ನು ಪಡೆದು ಪರಾಭವಗೊಂಡರು. ಇನ್ನೂ ರವಿಕುಮಾರ ಅಳ್ಳುಂಡಿ 18 ಸ್ಥಾನ ಪಡೆದು ಆಯ್ಕೆಯಾದರೆ, ನಾಗರಾಜ್ ತೇಲ್ಕರ್ 7 ಮತಗಳನ್ನು ಪಡೆದು ಪರಾಭವಗೊಂಡರು. ಒಂದು ಮತ ತಿರಸ್ಕೃತಗೊಂಡರೆ, ಒಂದು ಮತ ಚಲಾವಣೆ ಆಗಿರಲಿಲ್ಲ. ಇನ್ನೂ ಎರಡು ಉಪಾಧ್ಯಕ್ಷ ಸ್ಥಾನಗಳಿಗೆ ಬೂದಿಬಸವ, ಆನಂದ ಗುಡಿ ಮಾತ್ರ ನಾಮಪತ್ರ ಸಲ್ಲಿಸಿದರೆ, ಕಾರ್ಯದರ್ಶಿ ಸ್ಥಾನಕ್ಕೆ ಕೆ.ಬಂದೇನವಾಜ್ , ಚಂದ್ರಶೇಖರ ನಾಡಗೌಡ ಹಾಗೂ ಖಜಾಂಚಿ ಸ್ಥಾನಕ್ಕೆ ರಂಗನಾಥ ಕೊಂಬಿನ್ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಆರ್.ಗುರುನಾಥ ಫಲಿತಾಂಶ ಪ್ರಕಟಿಸಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯ ಸ್ವಾಮಿ ಕುಕನೂರು, ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ಜಿಲ್ಲಾ ಉಪಾಧ್ಯಕ್ಷರಾದ ಸೂಗೂರೇಶ ಎಸ್.ಗುಡಿ, ಮಹಾನಂದ ನಾಯಕ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮಿ ಪ್ರಸನ್ನ ಜೈನ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.

Leave a Reply

Your email address will not be published. Required fields are marked *