ಅರಕೇರಾ :
ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಿಧನರಾದ ಹಿರಿಯ ಶಾಸಕ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಬಿ.ಗಣೇಕಲ್ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದರು.
ಶಿವಣ್ಣ ಮಾಲೀ ಪಾಟೀಲ್ ಅವರು ಮಾತನಾಡಿ ಶಾಮನೂರು ಶಿವಶಂಕರಪ್ಪ ರವರು ರಾಜಕೀಯ ಅಜಾತಶತ್ರು, ದಾವಣಗೆರೆ ಜಿಲ್ಲೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅನೇಕ ಶಿಕ್ಷಣ ಸಂಸ್ಥೆಗಳ ಕಟ್ಟಿ ಶಿಕ್ಷಣ ಕ್ರಾಂತಿಯನ್ನುಂಟುಮಾಡಿದ್ದಾರೆ. ಅವರು ಸಾವು ನಾಡಿಗೆ ದುಃಖವನ್ನು ಉಂಟು ಮಾಡಿದೆ ಎಂದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷ ಮೌನ ಆಚರಿಸಲಾಯಿತು.
ಊರಿನ ಹಿರಿಯರಾದ ಶಾಂತಪ್ಪ ಸಾಹುಕಾರ ಅಂಗಡಿ, ಮಹೇಶ್ ಗೌಡ ಮಾಲೀ ಪಾಟೀಲ್, ಶಿವುಕುಮಾರ ಮಾಲೀ ಪಾಟೀಲ್, ವಿರೇಶಗೌಡ ಮಾಲೀ ಪಾಟೀಲ್, ಬಸವರಾಜ ದಳವಾಯಿ, ಸಿದ್ದಪ್ಪ ದೊರೆ, ಪಂಚಾಕ್ಷರಯ್ಯ ತಾತ, ಸಿದ್ದಪ್ಪ ಕರಣಿಗಿ, ಶಿವಕುಮಾರ್ ದಂಡಗುಂಡ, ಮಲ್ಕಪ್ಪ ಸೂಗೂರು, ಶಾಂತಗುರು, ಶರಭಣ್ಣ, ಶರಣಪ್ಪ ಪಡಶೆಟ್ಟಿ, ಸುಧಾಕರ ಬಳೆ, ಶಿವಕುಮಾರ್ ಛಾವಣಿ, ಹನುಮಂತ್ರಾಯ ದೊರೆ, ಶಿವಾನಂದ ಪೂಜಾರಿ, ಸಿದ್ದಪ್ಪ ಪಾಟೀಲ್, ಹನುಮಂತ್ರಾಯ ಪಾಟೀಲ್, ಅಭೀಷೇಕ್ ಅದ್ರಿ ಸೇರಿದಂತೆ ಇನ್ನಿತರರಿದ್ದರು.

