ಪೋತ್ನಾಳ : ಪೋತ್ನಾಳದ ಸ್ನೇಹ ಜ್ಯೋತಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ರಾಜ್ಯ ಯುವ ಕಾಂಗ್ರೆಸ್ ಮುಖಂಡರಾದ ಶ್ರೀ ರವಿ ಬೋಸರಾಜು ಹಾಗೂ , ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ. ಹಂಪಯ್ಯ ನಾಯಕ್ ಅವರು ಉದ್ಘಾಟಿಸಿದರು
ನಂತರ ಉದ್ಘಾಟನಾ ಭಾಷಣವನ್ನು ಮಾಡಿದ ಮಾನ್ಯ ಶಾಸಕರು ನಮ್ಮ ಭಾಗದಲ್ಲಿ 2006ರಿಂದ ಈ ಒಂದು ಗ್ರಾಮದಲ್ಲಿ ಸ್ನೇಹ ಜ್ಯೋತಿ ಶಾಲೆಯನ್ನು ಪ್ರಾರಂಭಿಸಿ ಈ ಭಾಗದ ಶೈಕ್ಷಣಿಕಕ್ಕೆ ಹೆಚ್ಚಿನ ಒತ್ತನ್ನು ನೀಡಿ ಈ ಭಾಗದ ಪ್ರಗತಿಗೆ ಸಾಕ್ಷಿಯಾಗಿದೆ ಸಂಸ್ಥೆ ಎಂದು ಹೇಳಿದರು. ಮಕ್ಕಳ ಶೈಕ್ಷಣಿಕ ಪ್ರಗತಿ, ಶಿಸ್ತು, ಸಂಸ್ಕಾರ ಹಾಗೂ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಭದ್ರ ಅಡಿಪಾಯ ಎಂದು ತಿಳಿಸಿದರು. ಶಾಲೆಗಳು ಕೇವಲ ಪಾಠಶಾಲೆಗಳಲ್ಲ, ಮಕ್ಕಳಲ್ಲಿನ ಪ್ರತಿಭೆ, ನಾಯಕತ್ವ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ಕೇಂದ್ರಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸ್ನೇಹ ಜ್ಯೋತಿ ಶಾಲೆಯ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಕರ ಸಮರ್ಪಣೆ ಮತ್ತು ಪೋಷಕರ ಸಹಕಾರ ಶ್ಲಾಘನೀಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದರೊಂದಿಗೆ ಅವರ ಭವಿಷ್ಯಕ್ಕೆ ದಾರಿ ತೋರಿಸುತ್ತವೆ ಎಂದು ಹೇಳಿ, ಎಲ್ಲಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಸೈಯದ್ ಖಾಲಿದ್ ಖಾದ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷನಿ ಲಕ್ಷ್ಮಿ ಈರಣ್ಣ, ಸೈಯದ್ ನಜರುದ್ದೀನ್ ಖಾದ್ರಿ, ವಸಂತ್ ಕೊಡ್ಲಿ ರಾಜ ಸುಭಾಷ್ ಚಂದ್ರ ನಾಯಕ್ ಪಂಪನಗೌಡ ಪೋತ್ನಾಳ, ಚೆನ್ನಪ್ಪ, ಹಾಸನ ಭಾಷ್, ಮಹಾಂತೇಶ್ ನಾಯಕ್, ಖಾನ್ ಸಾಬ್, ಮೊದ್ದಿನ್ ಸಾಬ್, ಮಲ್ಲೇಶ್ ಜಗ್ಲಿ, ಚಂದ ಪಾಶ ಗುತೇದ್ದರಾರು,ಸ್ನೇಹ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳು ಉಪಸ್ಥಿತರಿದ್ದರು.

