ರಾಯಚೂರು:
ಹೈದರಾಬಾದಿನ ಸೆಂಟ್ರಲ್ ಫೈನ್ ಆರ್ಟ್ಸ್ ಫೌಂಡೇಶನ್ ಹಾಗೂ ಸ್ನೇಹ ಯೂತ್ ಕಲ್ಚರಲ್ ಅಸೋಸಿಯೇಷನ್ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 14-12-2025 ಭಾನುವಾರ ನಡೆಯುವ ಸೌತ್ ಇಂಡಿಯಾ ಡ್ಯಾನ್ಸ್ ಕಾಂಪಿಟೇಶನ್ ಕಾರ್ಯಕ್ರಮದಲ್ಲಿ ರಾಯಚೂರು ತಾಲೂಕಿನ ದೇವಸಗೂರಿನ ಶ್ರೀ ವಿಶ್ವನಾಥ್ ಕೆ ಅಕ್ಕರಕಿ ಇವರು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಇವರನ್ನು ಗುರುತಿಸಿದ ಸ್ನೇಹ ಯೂತ್ ಕಲ್ಚರಲ್ ಅಸೋಸಿಯೇಷನ್ ಬೆಂಗಳೂರು ರವರು ಶ್ರೀ ವಿಶ್ವನಾಥ್ ಕೆ ಅಕ್ಕರಕಿ ರವರು ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ವಿದ್ಯರತ್ನ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿ. ಸ್ನೇಹ ಯುತ್ ಕಲ್ಚರಲ್ ಅಸೋಸಿಯೇಷಿಯನ್ ಅಧ್ಯಕ್ಷರಾದ ರಂಜಿತ್ ಕುಮಾರ ತಿಳಿಸಿದರು.
14-12-25 ಭಾನುವಾರ ಹೈದರಾಬಾದಿನಲ್ಲಿ ನಡೆಯುವ ಸೌತ್ ಇಂಡಿಯಾ ಡ್ಯಾನ್ಸ್ ಕಾಂಪಿಟೇಶನ್ ಕಾರ್ಯಕ್ರಮದ ಸುಂದರವಾದ ಭವ್ಯ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಶ್ರೀ ವಿಶ್ವನಾಥ್ ಕೆ ಅಕ್ಕರಕಿ ಇವರಿಗೆ ಕರ್ನಾಟಕ ವಿದ್ಯಾ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸ್ನೇಹ ಯೂತ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷರಾದ ರಂಜಿತ್ ಕುಮಾರ್ ತಿಳಿಸಿದರು.
