ತಾಳಿಕೋಟಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕರ್ತವ್ಯ ಲೋಪ ಎಸಗಿದ ಕಾರಣ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶನಿವಾರ ತಹಸಿಲ್ದಾರ್ ಡಾ. ವಿನಯಾ ಹೂಗಾರ ಇವರ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಡಿಸೆಂಬರ್ 13ರಂದು ಬೆಳಗಿನ ಜಾವ ಮೂರು ಗಂಟೆಯ ಸಮೀಪ ಪಟ್ಟಣದ ಬೇಪಾರಿ ಸಮಾಜದ ಯುವಕನೋರ್ವ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆತಂದಾಗ ಅಲ್ಲಿ ರಾತ್ರಿ ಅವಧಿಯಲ್ಲಿ ಸೇವೆ ಸಲ್ಲಿಸಬೇಕಾದ ವೈದ್ಯರು ತಮ್ಮ ಕರ್ತವ್ಯಕ್ಕೆ ಹಾಜರಾಗದೆ ಇರದ ಕಾರಣ ರೋಗಿಗೆ ಸಮಯಕ್ಕೆ ಪ್ರಾಥಮಿಕ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮರಣವನ್ನು ಹೊಂದಿದ್ದಾನೆ ಎಂದು ಆರೂಪಿಸಲಾಗಿದ್ದು ವೈದ್ಯರ ಗೈರು ಹಾಜರಿ ಕುರಿತು ಅಧಿಕಾರಿಗಳು ಸಮರ್ಪಕ ಉತ್ತರವನ್ನು ನೀಡಿಲ್ಲ ಸರ್ಕಾರ ರೋಗಿಗಳಿಗೆ ಅನುಕೂಲವಾಗಲೆಂದು ಲಕ್ಷ ಗಟ್ಟಲೆ ಸಂಬಳವನ್ನು ಕೊಟ್ಟು ನೇಮಿಸಿಕೊಳ್ಳುತ್ತದೆ ಆದರೆ ಬಡಜನರಗಾಗಿ ಕೆಲಸ ಮಾಡಬೇಕಾದ ವೈದ್ಯರು ತಮ್ಮ ಕರ್ತವ್ಯ ಲೋಪದಿಂದ ಇಂಥ ದುರ್ಘಟನೆಗಳು ಸಂಭವಿಸಲು ಕಾರಣೀ ಕರ್ತರಾಗುತ್ತಿದ್ದಾರೆ. ರಾತ್ರಿಯ ಅವಧಿಯ ಸೇವೆಯಲ್ಲಿ ಇರಬೇಕಾದ ತಜ್ಞ ವೈದ್ಯ ಇಲ್ಲದ ಕಾರಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧ ಇಲ್ಲದ ವ್ಯಕ್ತಿ ರೋಗಿಗೆ ಚಿಕಿತ್ಸೆ ನೀಡಿರುವುದರಿಂದ ಈ ಗಂಭೀರ ಸಮಸ್ಯೆ ಉದ್ಭವ ವಾಗಿದೆ ಎಂದು ಆರೋಪಿಸಲಾಗಿದ್ದು ಜಿಲ್ಲಾಧಿಕಾರಿಗಳು ಇದರ ತನಿಖೆಗೆ ಆದೇಶಿಸಿ ಕರ್ತವ್ಯ ಲೋಪ ಎಸಗಿದ ವೈದ್ಯಾಧಿಕಾರಿಗಳ ಮೇಲೆ ಇಲಾಖಾವಾರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಮನವಿಗೆ ಕೂಡಲೇ ಸ್ಪಂದಿಸದಿದ್ದರೆ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ತಾಳಿಕೋಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದಾಗಿ ತಿಳಿಸಲಾಗಿದೆ.ಈ ಸಮಯದಲ್ಲಿ ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈ ಭೀಮ ಮುತ್ತಗಿ, ಪದಾಧಿಕಾರಿಗಳಾದ ನಿಸಾರ ಬೇಪಾರಿ, ಅಬೂಬಕರ ಲಾಹೋರಿ, ಗುರುಪ್ರಸಾದ್ ಬಿಜಿ,ಕಾಶಿನಾಥ ಕಾರಗನೂರ,ನಬಿ ಲಾಹೋರಿ, ಶೌಕತ್ ಲಾಹೋರಿ, ಸುಭಾಸ ಅಗಸರ, ಪೀರಸಾ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *