ಗುಳಬಾಳ : ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಐತಿಹಾಸಿಕ ಹಿನ್ನೆಲೆ ಇರುವ 4000=00 ಮೌಲ್ಯದ ಬ್ಯಾನರ್ ( ಕಬ್ಬಿಣದ ಪ್ರೇಮ್ ನೊಂದಿಗೆ 5/11 ಫೀಟ್ ಸ್ಕ್ರೀನ್ ) ದೇಣಿಗೆ ನೀಡಿದ ಶ್ರೀ ಹುಲಗಪ್ಪ.ಹ.ಇಲಕಲ್ ಇವರಿಗೆ ಶಾಲೆಯ ವತಿಯಿಂದ ಅಭಿನಂದಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಭೀಮನಗೌಡ ಬಿರಾದಾರ ಮಾತನಾಡಿ ತಮ್ಮ ಮಕ್ಕಳು ಶಿಕ್ಷಣ ಪಡೆಯುವ ಸರಕಾರಿ ಶಾಲೆಗೆ ದೇಣಿಗೆ ನೀಡಿದ ಮಹನೀಯರ ಕುಟುಂಬಕ್ಕೆ ದೇವರು ಒಳ್ಳೆಯ ಆರೋಗ್ಯ ಮತ್ತು ಶಿಕ್ಷಣ ಕಲ್ಪಿಸಲಿ ಎಂದು ಹೇಳಿದರು,ಈ ಸಂದರ್ಭ ರಾಜ್ಯ ಗ್ರೇಡ್ 02 ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಬಸನಗೌಡ ರಾಜನಕೋಳೂರ,ಶಿಕ್ಷಕರಾದ ಪ್ರಭುಗೌಡ ಬಿರಾದಾರ,ಕಡ್ಲಬಾಳಪ್ಪ,ಹುಲಗನಗೌಡ ಹೊಸಮನಿ,ಶಿಕ್ಷಕಿಯರಾದ ಯಂಕಮ್ಮ ಬಮ್ಮನಳ್ಳಿ,ಭಾಗ್ಯಶ್ರೀ ಕಕ್ಕೇರಿ,ಸರೋಜಾ ಅಂಬಿಗೇರ,ಹುಲಗಪ್ಪ ಇಲಕಲ್ ಇವರ ಮಕ್ಕಳಾದ ದಿವ್ಯಾ,ಪ್ರವೀಣ ಇದ್ದರು.

