ನಗರದ ಖಾಸಗಿ ಹೊಟೇಲ್ ನಲ್ಲಿ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿಯವರು ನವ ಸಂಕಲ್ಪ ನವ ಸಿಂಧನೂರು ಎಂಬ ಘೋಷ್ಯ ವಾಕ್ಯದಡಿಯಲ್ಲಿ ನನ್ನ ಕನಸಿನ ಸಿಂಧನೂರು ಹೇಗಿರಬೇಕು ಎಂಬುದರ ಕುರಿತು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.
ಹಿರಿಯ ಪತ್ರಕರ್ತರು ನಾಮಫಲಕ ಅನಾವರಣ ಹಾಗೂ ಯುವ ಪತ್ರಕರ್ತರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನನ್ನ ಕನಸಿನ ಸಿಂಧನೂರು ಹೇಗಿರಬೇಕು ಎನ್ನುವ ಕುರಿತು ಹಲವಾರು ಪತ್ರಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಪ್ರಮುಖವಾಗಿ ರೈತರ ಸಮಸ್ಯೆ, ರೈತರ ಸಮಸ್ಯೆಗೆ ಪರಿಹಾರ, ನಿರುದ್ಯೋಗ ಮತ್ತು ಸಮಸ್ಯೆಗೆ ಪರಿಹಾರ, ಶೈಕ್ಷಣಿಕವಾಗಿ ಯಾವರೀತಿ ಅಭಿವೃದ್ಧಿ ಗೊಳ್ಳಬೇಕು, ತುಂಗಭದ್ರಾ ಜಲಾಶಯ ಉಳಿವಿಗಾಗಿ ಮಾಡಬೇಕಾದ ಮಾರ್ಗ ಸೂಚಿ ಹಾಗೂ ನವಲಿ ಜಲಾಶಯ ನಿರ್ಮಿಸಲು ಇರುವ ಅಡೆ ತಡೆಗಳ ಬಗ್ಗೆ ಚರ್ಚಿಸಲಾಯಿತು.
ಜೊತೆಗೆ ಸ್ಥಳೀಯವಾಗಿ ಧೂಳು ಮುಕ್ತ ಸಿಂಧನೂರು ಮಾಡುವುದು ಹೇಗೆ ನಗರಸಭೆ ಯಾವರೀತಿ ಕಾರ್ಯ ನಿರ್ವಹಿಸುತ್ತದೆ, ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸೇವೆಯನ್ನು ಮರೆತು ಜಾತ್ರೆ, ಉತ್ಸವ, ಯಶಸ್ವಿ ಹೆಸರಿನಲ್ಲಿ, ಮತ್ತು ವಿಡಿಯೋ ಕಾನ್ಫರೆನ್ಸ್ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಸಾರಿಗೆ ಸಂಸ್ಥೆಯ ಸೌಲಭ್ಯ, ಸೇರಿದಂತೆ ಪೊಲೀಸ್ ಇಲಾಖೆ ಅಕ್ರಮ ಚಟುವಟಿಕೆ ತಡೆಗಟ್ಟಲು ಎಷ್ಟರಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿವಿಲ್ ಪ್ರಕರಣಗಳಲ್ಲಿ ಏಕೆ ಮಧ್ಯೆ ಪ್ರವೇಶಿಸುತ್ತಿದ್ದಾರೆ ಎನ್ನುವ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.
ಈ ವೇಳೆ: ಕಾಂಗ್ರೆಸ್ ಪಕ್ಷದ ಮುಖಂಡರು, ಹಲವಾರು ಪತ್ರಕರ್ತರು ಸಂವಾದದಲ್ಲಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡರು.

