ಅರಕೇರ : ಡಿ 12 ಅರಕೇರ ತಾಲೂಕಿನ ಗಲಗ್ ಗ್ರಾಮದಲ್ಲಿ
ಆರ್. ಆರ್. ಆಸ್ಪತ್ರೆಯು ಸಾರ್ವಜನಿಕರ ಅನುಕೂಲಕ್ಕಾಗಿ ಬೃಹತ್ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸ ಲಾಯಿತು .
ಶಿಬಿರದಲ್ಲಿ ಪ್ರಮುಖ ವೈದ್ಯರಾದ ಡಾ. ಎಂ. ವಿ. ಪಾಟೀಲ್
ಈ ಶಿಬಿರದಲ್ಲಿ ಮಧುಮೇಹ (ಸಕ್ಕರೆ ಕಾಯಿಲೆ), ಅಧಿಕ ರಕ್ತದೊತ್ತಡ (ಬಿ.ಪಿ), ಥೈರಾಯ್ಡ್ ಸಮಸ್ಯೆಗಳು, ಮತ್ತು ಹೃದಯ ರೋಗಗಳಂತಹ ದೀರ್ಘಕಾಲದ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಸಲಹೆಯನ್ನು ನೀಡಲಾಯಿತು
ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ನೆಗಡಿ, ಕೆಮ್ಮು, ಜ್ವರ, ತಲೆನೋವು, ಹಾಗೂ ಎಲುಬು-ಕೀಲು ನೋವುಗಳಿಗೆ ಸಹ ತಪಾಸಣೆಯ ಸೌಲಭ್ಯ ವಿತ್ತು
ಇದಲ್ಲದೆ, ಮೂತ್ರಪಿಂಡ ಸಂಬಂಧಿಸೀದಾ ಸಮಸ್ಯೆಗಳು, ಮೂಲವ್ಯಾದಿ ಅಪಘಾತದ ಗಾಯಗಳು ಮತ್ತು ಮಧುಮೇಹ ಹೃದಯಕ್ಕೆ ಸಂಬಂಧಿಸಿದ ಇನ್ನು ಅನೇಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸುಮಾರು 130 ಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಮಲ್ಲನಗೌಡ ವಿ ಪಾಟೀಲ್ ಹಾಗೂ ಸಿಬ್ಬಂದಿ ವರ್ಗದವರಾದ ಅಭಿಷೇಕ್ ಮತ್ತು ಅರುಣ್ ಹಾಗೂ ತಾಯಮ್ಮ ಇವರು ಉಚಿತ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿದ್ದರು

