ತಾಳಿಕೋಟೆ: ಗುಜರಾತ್‌ನ ಶ್ರೀಮದ್ ರಾಯಚಂದ ಆಸ್ಪತ್ರೆ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯ್.ಆರ್.ಡಿ. ಗ್ರಾಮೀಣ ಅಭಿವೃದ್ಧಿ ಸಂಸ್ಥೆ ,ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಭಾರತೀಯ ಸುರಾಜ್ಯ ಸಂಸ್ಥೆಗಳ ಇವುಗಳ ಸಂಯುಕ್ತ ಆಶ್ರಯದಲ್ಲಿ
ಆರೋಗ್ಯ ತಪಾಸಣೆ ಮತ್ತು ಅನಿಮಿಯಾ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮ ಶುಕ್ರವಾರ ಪಟ್ಟಣದ ಎಸ್.ಕೆ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಿತು.
ಎ ಎಮ್ ಪಿ ಯೋಜನಾ ಸಂಯೋಜಕರಾದ ಶಾಂತಾ ಬೇಲಾಳ, ಸೋಮು ಸಜ್ಜನ, ಧನಪಾಲ ಬೇಡರಟ್ಟಿ, ಕುಸುಮ ಮಠ,ಶಕುಂತಲಾ ಮಠ, ಸಹನಾ ಪಾಟೀಲ ಮತ್ತು ಸಿಬ್ಬಂದಿಗಳು 191 ವಿದ್ಯಾರ್ಥಿನಿಯರ ರಕ್ತ ಪರೀಕ್ಷೆ ನಡೆಸಿ ರಕ್ತಹೀನತೆ ಕಂಡು ಬಂದ 101 ವಿದ್ಯಾರ್ಥಿನಿಯರಿಗೆ ಮೂರು ತಿಂಗಳುಗಳ ಪೊಲಿಕ್ ಎಸಿಡ್ ಮಾತ್ರೆಗಳನ್ನು ನೀಡಿ ಮತ್ತೆ ಮೂರು ತಂಗಳ ನಂತರ ಮತ್ತೆ ರಕ್ತ ಪರೀಕ್ಷೆ ನಡೆಸುವುದಾಗಿ ತಿಳಿಸಿದರು. ರಕ್ತಹೀನತೆ ಯಿಂದ ಹೊರಬರಲು ಸಮತೋಲನ ಆಹಾರದ ಮಹತ್ವ ತಿಳಿಸಿದರು. ಈ ವೇಳೆಯಲ್ಲಿ ಮುಖ್ಯೋಪಾಧ್ಯಾಯ ಡಾ.ಅನಿಲಕುಮಾರ ಇರಾಜ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

