ಮಾನ್ವಿ: ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕವತಿಯಿಂದ ತಹಸೀಲ್ದಾರ್ ರವರಿಗೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲೀ ಪಾಟೀಲ್ ಮಾತನಾಡಿ ತಾಲೂಕಿನಲ್ಲಿ ಜೋಳ ಬೆಳೆದ ರೈತರ ಜಮೀನುಗಳನ್ನು ಜಿ.ಪಿ.ಎಸ್. ಮಾಡಿ ಬೆಂಬಲ ಬೆಲೆ ಅಡಿಯಲ್ಲಿ ರೈತರಿಂದ ಜೋಳವನ್ನು ಖರೀದಿ ಮಾಡುವುದಕ್ಕೇ ಕೂಡಲೆ ನೊಂದಾಣಿ ಪ್ರಾರಂಭಿಸಬೇಕು , ತಾಲೂಕಿನಲ್ಲಿ ರೈತರ ಅನುಕೂಲಕ್ಕೆ ತಕ್ಕಂತೆ ಜೋಳ,ಭತ್ತ,ತೊಗರಿ ಖರೀದಿಗೆ ಅಗತ್ಯ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು, ಹತ್ತಿ ಬೆಳೆದ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟಕ್ಕೆ ಇರುವ ತೊಂದರೆಗಳನ್ನು ನಿವಾರಿಸಬೇಕು ಹಾಗೂ ನೊಂದಾಣಿಯಲ್ಲಿ ಇರುವಂತ ಸಮಸ್ಯೆಗಳನ್ನು ಸರಿಪಡಿಸಬೇಕು.ಗ್ರಾಮೀಣ ಭಾಗದ ರಸ್ತೆಗಳು ಹಾಳಗಿದ್ದು ಅವುಗಳನ್ನು ಸರಿಪಡಿಸಬೇಕು.ವಿದ್ಯುತ್ ತೊಂದರೆಗಳನ್ನು ನಿವಾರಿಸಬೇಕು, ಮಾನ್ವಿ ಪಟ್ಟಣದಲ್ಲಿ ಕೃಷಿ ಉತ್ಪನ್ನ ಕೇಂದ್ರದಿAದ ನಡೆಯುತ್ತಿದ ಜಾನುವಾರುಗಳ ಮಾರಾಟದ ಸಂತೆ ರದ್ದಾಗಿರುವುದರಿಂದ ರೈತರು ಜಾನುವಾರುಗಳನ್ನು ಖರೀದಿಸುವುದಕ್ಕೆ ಹಾಗೂ ಮಾರಾಟ ಮಾಡುವುದಕ್ಕೆ ತೊಂದರೆಯಾಗಿರುವುದರಿAದ ಕೂಡಲೆ ದನ ಮತ್ತು ಕುರಿ ಸಂತೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಮನವಿ ಸ್ವೀಕರಿಸಿ ಮಾತನಾಡಿ ರೈತರ ಸಮಸ್ಯೆಗಳ ನಿವಾರಣೆಗಾಗಿ ಸಂಬAದಿಸಿದ ಇಲಾಖೆಯ ಅಧಿಕಾರಿಗಳ ಹಾಗೂ ರೈತ ಸಂಘದ ಪ್ರಾತಿನಿಧಿಗಳ ಸಭೆಯನ್ನು ನಡೆಸಿ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಬರವಸೆ ನೀಡಿದರು.
ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಬೆಳ್ಳಿಗೆ ಯಿಂದ ನೂರಾರು ರೈತರು ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಪ್ರತಿಭಟನೆ ನಡೆಸಿ ನಂತರ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಹಾಗೂ ಕೃಷಿ ಇಲಾಖೆಯ ತಾ.ಸಹಾಯಕ ನಿರ್ದೇಶಕರಾದ ಗುರುನಾಥ ಭೂಸನೂರ್ ರವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಉಪಾಧ್ಯಕ್ಷರಾದ ದೊಡ್ಡಬಸವನಗೌಡ ಬಲ್ಲಟ್ಟಗಿ, ರಾಜ್ಯ ಕಾರ್ಯದರ್ಶಿ ಗಳಾದ ಯಂಕಪ್ಪ ಕಾರಬಾರಿ, ಸೂಗುರಯ್ಯ ಆರ್.ಎಸ್.ಮಠ,ಬಸವರಾಜ ಮಾಲಿ ಪಾಟೀಲ್, ಬೂದಯ್ಯಸ್ವಾಮಿ ಸಿದ್ದಯ್ಯಸ್ವಾಮಿ ಗೋರ್ಕಲ್, ಮಲ್ಲಣ್ಣದಿನ್ನಿ, ಹೆಚ್.ಶಂಕ್ರಪ್ಪ ದೇವತ್ ಗಲ್, ದೇವರಾಜ ನಾಯಕ, ಅಮರೇಸ ಅಲ್ದಾಳ್, ಚಂದ್ರಶೇಖರ ,ಹನುಮಂತ, ದೇವೆಂದ್ರಪ್ಪ, ಶಿವರಾಜ, ಚನ್ನಬಸವ ಗವಿಗಟ್ಟ, ಶರಣಪ್ಪ, ಬ್ರಹ್ಮಯ್ಯ, ನಿಬಿಸಾಬ್, ಹನುಮಂತ.ಎA. ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಮಾನ್ವಿ: ಪಟ್ಟಣದ ಶಾಸಕರ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕವತಿಯಿಂದ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.

