ರಾಯಚೂರು,ಡಿ.12- ಕಣ್ಣಿಗೆ ಕಾಣದ ಸುರುಳಿಯಾಕಾರದ ಬ್ಯಾಕ್ಟೀರಿಯಂ ಟ್ರೆಪೋನೆಮಾ ಪ್ಯಾಲಿಡಮ್‌ನಿಂದ ಹರಡುವ ಇದು ಸಿಫಿಲಿಸ್ ಸೊಂಕು ಹುಣ್ಣಿನ ರೂಪದಲ್ಲಿ ಇದ್ದು ಅಸುರಕ್ಷಿತ, ಅಪರಿಚಿತರೊಂದಿಗಿನ ಲೈಂಗಿಕ ಸಂಪರ್ಕದಿಂದ ಒಬ್ಬರಿಂದ ಒಬ್ಬರಿಗೆ ಹರುಡುವ ಸಾಧ್ಯತೆಯಿದ್ದು ಈ ದಿಶೇಯಲ್ಲಿ ವೈಯಕ್ತಿಕ ಕಾಳಜಿ ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾ ಡ್ಯಾಪ್ಕೋ ಹಾಗೂ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಮಹಮ್ಮದ್ ಶಾಕೀರ್ ಮೊಹೀಯುದ್ದಿನ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೂಲಕ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹೆಚ್‌ಐವಿ ಏಡ್ಸ್ ಯುವ ಜನೋತ್ಸವ ಅಡಿಯಲ್ಲಿ ಗರ್ಭಿಣಿ ತಾಯಂದಿರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಾ, ಸಾಮಾನ್ಯವಾಗಿ ಲೈಂಗಿಕ ರೋಗಗಳು ಯಾರದೋ ತಪ್ಪಿಗೆ ಇನ್ನೊಬ್ಬರಿಗೆ ಶಿಕ್ಷೆಯ ರೂಪದಲ್ಲಿ ಬರುತ್ತವೆ, ಅದರಲ್ಲೂ ಹೆಚ್‌ಐವಿ, ಸಿಫಿಲಿಸ್ ಪ್ರಮುಖವಾಗಿವೆ.
ದೈಹಿಕ ಸಂಪರ್ಕದ ಸಮಯದಲ್ಲಿ ಸಿಫಿಲಿಟಿಕ್ ಹುಣ್ಣು ವಿನೊಂದಿಗೆ ನೇರ ಸಂಪರ್ಕದ ಮೂಲಕ ಹರಡುವುದಲ್ಲದೆ, ಸೊಂಕಿಗೆ ಒಳಗಾದಾಗ ಗರ್ಭಾವಸ್ಥೆಯಲ್ಲಿ ಸೋಂಕಿತ ತಾಯಿಯಿಂದ ಅವಳ ಮಗುವಿಗೆ ಸಹ ಹರಡಬಹುದು ಅದರಲ್ಲೂ ಹುಟ್ಟುವ ಮಗು ಸಹ ಜನ್ಮಜಾತ ಸಿಫಿಲಿಸ್‌ಗೆ ಕಾರಣವಾಗ ಬಹುದಾಗಿದೆ.
ಮತ್ತು ಸಾಂಕ್ರಾಮಿಕ ಸೋಂಕು ರಕ್ತ ಮತ್ತು ದುಗ್ಧರಸದಿಂದ ದೇಹದಾದ್ಯಂತ ಹರಡಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಾರಣ ಜನನಾಂಗಗಳಲ್ಲಿ ದೀರ್ಘಕಾಲ ಹುಣ್ಣುಗಳು ಇದ್ದಲ್ಲಿ ನಿರ್ಲಕ್ಷಿಸದೆ ತಪ್ಪದೆ ತಜ್ಞ ವೈದ್ಯರಿಂದ ಸಲಹೆ, ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆದು ಸ್ವಾಸ್ಥ್ಯ ಸಮಾಜ ನಿರ್ಮಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ತಜ್ಞರಾದ ಡಾ ಅನುಷಾ, ಜಿಲ್ಲಾ ಡ್ಯಾಪ್ಕೊ ಮೇಲ್ವಿಚಾರಕರ ಮಲ್ಲಯ್ಯ ಮಠಪತಿ ಮಾತನಾಡಿದರು.
ರೆಡಿಯಾಲಜಿಸ್ಟ್ ಡಾ ಭುವನೇಶ್ವರಿ,
ಪ್ರಸೂತಿ ತಜ್ಞೆ ಡಾ ಪವಿತ್ರಾ ಪಾಟೀಲ್, ವೈದ್ಯಾಧಿಕಾರಿ ಡಾ ರಾಕೇಶ್,
ಡಾ ಸುನೀತಾ,
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ,
ಹಿರಿಯ ಶುಶ್ರೂಷಣಾಧಿಕಾರಿ ಸಲೋಮಿ, ಡ್ಯಾಪ್ಕೊ ವಿಭಾಗದ ಪುಷ್ಪಲತಾ,
ಸಿಮಾಲತಾ, ಶಾಂತಕುಮಾರ,
ರಾಮಚಂದ್ರ, ಸೇರಿದಂತೆ ತಾಯಂದಿರು ಹಾಗೂ ಇತರರು ಉಪಸ್ಥಿತರಿದ್ದರು.

