ತಾಲೂಕಿನ ಬೂತಲದಿನ್ನಿ ಗ್ರಾಮದ ಗ್ರಾಮದೇವತೆ ಗುಂಡಿನ ದುರ್ಗಮ್ಮ ದೇವಿಗೆ ಉಡಿ ತುಂಬಿ ಆರತಿ ಬೆಳಗುವ ಈ ವಿಶೇಷ ಕಾರ್ಯಕ್ರಮವನ್ನು ಗ್ರಾಮಸ್ಥರ ಸಮಕ್ಷಮದಲ್ಲಿ ಸಂಭ್ರಮದ ಸಕಲ ವಾದ್ಯಗಳೊಂದಿಗೆ
ನೆರವೇರಿತು. ಬೆಳಗ್ಗೆ ದೇವಸ್ಥಾನದಲ್ಲಿ ಗ್ರಾಮ ದೇವತೆಗೆ ವಿಶೇಷ ಪೂಜೆ, ನೈವೇದ್ಯ ಕಾರ್ಯಕ್ರಮಗಳು ನಡೆದವು, ಗ್ರಾಮ ದೇವಸ್ಥಾನದಿಂದ ಡೊಳ್ಳು, ವಾದ್ಯಗಳೊಂದಿಗೆ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಸುತ್ತಮುತ್ತಲಿನ ಗ್ರಾಮಗಳ ದೇವಿಯ ಸದ್ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದರು. ಶಕ್ತಿ ದೇವತೆ ಗುಂಡಿನ ದುರ್ಗಮ್ಮ ದೇವಿಗೆ ಗ್ರಾಮಸ್ಥರು ವಿಶೇಷವಾಗಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಉಡಿ ತುಂಬುವುದು ವಿಶೇಷವಾಗಿತ್ತು. ನೂರಾರು ಸುಮಂಗಲೆಯರು ಆರತಿ ಮತ್ತು ನೈವೇದ್ಯದೊಂದಿಗೆ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ಈ ವೇಳೆ: ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳು, ಯುವಕರು, ಸೇರಿ, ದೇವಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ, ನೈವಿದ್ಯೆ ಅರ್ಪಿಸಿ, ದೇವಿಯ ಕೃಪೆಗೆ ಪಾತ್ರರಾದರು.

