ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ತಾಲೂಕಿನ ಅಂಬಾಮಠ, ಸುಲ್ತಾನಪುರ, ಸಾಲುಗುಂದ, ಸುಕಾಲಪೇಟೆ, ಸೇರಿದಂತೆ ಇನ್ನಿತರೆ ಸರ್ಕಾರಿ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್, ಪೆನ್ಸಿಲ್, ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವುದರ ಮೂಲಕ ವಿದ್ಯಾರ್ಥಿಗಳ ಜೀವನ ದೀಪದಂತೆ ಬೆಳಕಾಗಲಿ ಎಂದು ಹಾರೈಸಿದರು.
ರಕ್ಷಣಾ ವೇದಿಕೆ ವತಿಯಿಂದ ನೋಟ್ ಬುಕ್, ಪೆನ್ನು, ಪೆನ್ಸಿಲ್, ಕೊಟ್ಟಿರುವುದು ನಿಜಕ್ಕೂ ಸಾರ್ಥಕವಾದ ಕೆಲಸ, ಇದು ಇತರರಿಗೆ ಮಾದರಿಯಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಸುರೇಶ್ ಗೊಬ್ಬರಕಲ್, ಸೇರಿದಂತೆ ತಾಲೂಕು, ನಗರ ಮತ್ತು ಗ್ರಾಮ ಘಟಕದ ಎಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಉಪಸ್ಥಿತರಿದ್ದರು.

