ಜನವರಿ 2025 ರಿಂದ ಇಲ್ಲಿಯವರೆಗೂ ಸುಮಾರು 262 ವ್ಯಕ್ತಿಗಳು ಅಪಘಾತದಲ್ಲಿ ಮರಣ ಹೊಂದಿದ್ದು, 700ಕ್ಕೂ ಅಧಿಕ ಜನರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಇನ್ನೂ ಕೆಲವರು ಉಳಿಯುತ್ತಾರೋ ಇಲ್ಲವೋ ಅನ್ನುವುದು ನಂಬಿಕೆಯಿಲ್ಲ. ದೇಶದಾದ್ಯಂತ ಪ್ರತಿದಿನ ವಾಹನಗಳ ಸಂಖ್ಯೆ ಹೆಚ್ಷಾಗುತ್ತಿದ್ದು, ನಮ್ಮ ರಾಯಚೂರು ಜಿಲ್ಲೆ ಕೂಡ ಹೊರತಾಗಿಲ್ಲ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ರಸ್ತೆಗಳು ಮಾತ್ರ ಕಿರಿದಾಗಿರುವುದು ಅಸುರಕ್ಷತೆಯಾಗಿದೆ. ಪ್ರತಿಯೊಬ್ಬರು ರಸ್ತೆ ಸುರಕ್ಷತೆಗಾಗಿ, ಸೈಬರ್ ವಂಚನೆಗಳಿಂದ ಜಾಗೃತರಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಟೌನ್ ಹಾಲ್ ನಲ್ಲಿ ಸಿಂಧನೂರು ಪೊಲೀಸ್ ಉಪವಿಭಾಗದ ವತಿಯಿಂದ ಆಯೋಜಿಸಿದ್ದ ಸೈಬರ್ ಅಪರಾಧಿಗಳ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ವಾಹನಗಳಲ್ಲಿ ಸಂಚರಿಸುವಾಗ ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ನಿಯಮಗಳನ್ನು ಪಾಲಿಸದ ಪರಿಣಾಮ ಮೂರು ಪಟ್ಟು ಹೆಚ್ಚು ವಾಹನಗಳ ಸವಾರರಿಗೆ ದಂಡವನ್ನು ವಿಧಿಸಲಾಗಿದ್ದು, ಬಹುತೇಕ ವಾಹನಗಳಿಗೆ ಇನ್ಸೂರೆನ್ಸ್ ರಿನಿವಲ್ ಮಾಡಿಸಿರುವುದಿಲ್ಲ ಅದರಲ್ಲೂ ಟ್ರಾಕ್ಟರ್ ಗಳಿಗೆ ಇನ್ಸೂರೆನ್ಸ್ ಇಲ್ಲ. ಮಧ್ಯ ಸೇವಿಸಿ, ಹೆಲ್ಮೆಟ್ ಧರಿಸದೆ, ವಾಹನಗಳನ್ನು ಚಲಾಯಿಸುವುದರಿಂದ ಕೆಲವೊಮ್ಮೆ ಓವರ್ ಸ್ಪೀಡ್ ಹಾಗೂ ವಾಹನಗಳ ಚೇಸಿಂಗ್ ಮಾಡುವುದರಿಂದ ಹಲವಾರು ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದರಲ್ಲಿ ವಿದ್ಯಾರ್ಥಿ ಯುವಜನರು ಹೊರತಾಗಿಲ್ಲ. ಪರಿಣಾಮ ಹಲವಾರು ಕುಟುಂಬದ ಸದಸ್ಯರು ತಮ್ಮ ಕುಟುಂಬಕ್ಕೆ ದುಡಿಯುವ ಕೈಗಳನ್ನು ಮತ್ತು ಭವಿಷ್ಯದ ಬೆಳಕಾದ ಮಕ್ಕಳನ್ನೇ ಕಳೆದುಕೊಂಡಿದ್ದಾರೆ.
ಸೈಬರ್ ಪ್ರಕರಣಗಳಲ್ಲಿ ಬಹುತೇಕವಾಗಿ ವಂಚನಗೆ ಒಳಗಾಗುತ್ತಿರುವುದು ಅವಿದ್ಯಾವಂತರಲ್ಲ. ಸೈಬರ್ ಬಲಿಗೆ ವಿದ್ಯಾವಂತರು. ಹಣಕಾಸು ದುಪ್ಪಟ್ಟಿನ ಆಸೆಗಾಗಿ ಹಾಗೂ ತಾವು ಯಾವುದೋ ಬಹುಮಾನ ಗೆದ್ದಿದ್ದೀರಿ ಎಂದು ಸೈಬರ್ ವಂಚಕರು ಕಳಿಸುವ ಸಂದೇಶದ ಅನುಸಾರ ತಮ್ಮ ಮೊಬೈಲ್ ನಲ್ಲಿ ಬಂದಿರುವ ಒಟಿಪಿ ಹಾಗೂ ಇತರೆ ಸಂದೇಶಗಳನ್ನು ಕ್ಲಿಕ್ ಮಾಡುವುದರಿಂದ ಅದರಲ್ಲೂ ಪ್ರಮುಖವಾಗಿ ಮಹಿಳೆಯರು, ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪೋಟೋಗಳನ್ನು ಅಪ್ಲೋಡ್ ಮಾಡಿದ ನಂತರ ಸೈಬರ್ ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡು ಪೋಟೋವನ್ನು ವಿಕೃತಗೊಳಿಸಿ ಮಹಿಳೆಯರನ್ನು ಕುಗ್ಗಿಸಿ ಹಣವನ್ನು ದೋಚುತ್ತಿದ್ದಾರೆ. ಕಾರಣ ರಸ್ತೆ ಸುರಕ್ಷತೆಗಾಗಿ ಹಾಗೂ ಸೈಬರ್ ಅಪರಾಧಿಗಳಿಂದ ಜಾಗೃತರಾಗಿ ಸದೃಢ ಭಾರತ ನಿರ್ಮಾಣಕ್ಕಾಗಿ ಮುಂದಾಗಬೇಕೆಂದು ಕರೆ ನೀಡಿದರು.
ಸೈಬರ್ ಅಪರಾಧಿಗಳ ಮಾಸಾಚರಣೆ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿ, ಪ್ರಥಮವಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ 5 ಸಾವಿರ ನಗದು, ದ್ವಿತೀಯವಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ 3 ಸಾವಿರ ನಗದು, ಹಾಗೂ ತೃತೀಯವಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ 2 ಸಾವಿರ ನಗದು ಮತ್ತು ಪ್ರಶಂಸೆ ಪತ್ರ ನೀಡಿ, ಇಡೀ ದೇಶದಲ್ಲೇ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿ ಪಡೆದ ಕವಿತಾಳ ಪೊಲೀಸ್ ಠಾಣೆಯ ಪಿಎಸ್ಐ ಗುರುಚಂದ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ವೇಳೆ: ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಚಂದ್ರಶೇಖರ್, ಡಿವೈಎಸ್ಪಿ ಚಂದ್ರಶೇಖರ್ ಜಿ
ಪೌರಾಯುಕ್ತ ಪಾಂಡುರಂಗ ಇಟಗಿ, ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಆರ್.ಸಿ.ಪಾಟೀಲ್, ಸೇರಿದಂತೆ ಸಿಪಿಐ ವೀರಾರೆಡ್ಡಿ, ತುರ್ವಿಹಾಳ ಪಿಎಸ್ಐ ಸುಜಾತ, ಮಾನ್ವಿ ಪಿಎಸ್ಐ ಕೆಂಚರೆಡ್ಡಿ, ಬಳಗಾನೂರು ಪಿಎಸ್ಐ ಯರಿಯಪ್ಪ, ಪೊಲೀಸ್ ಸಿಬ್ಬಂದಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

