ಸಿಂಧನೂರು: ಡಿ 12 ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಸನ್‌ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ (ಡಿ. ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜು) ಹಾಗೂ ತಾಲೂಕು ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ದಿನದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನುವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಸನ್ಮಾನ್ಯ ನ್ಯಾಯಾಧೀಶರು ಶ್ರೀಮತಿ ರೂಪ, ಪ್ರಧಾನ ಸಿವಿಲ್ ನ್ಯಾಯಾಧೀಶರು, ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೆ. ಭೀಮನಗೌಡ ಅಧ್ಯಕ್ಷರು – ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ಹಾಗೂ ಎಲ್ಲಾ ಮುಖ್ಯ ಅತಿಥಿಗಳಿಗೆ ಪುಷ್ಪಾರ್ಚನೆ ಮೂಲಕ ಆತ್ಮೀಯ ಸ್ವಾಗತ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಆರೋಗ್ಯ ದಿನದ ಕಾರ್ಯಕ್ರಮಕ್ಕೆ ಸಂಕೇತಾತ್ಮಕ ಆರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ರೂಪ ಅವರು, “ದೇವರು ಪ್ರತಿಯೊಬ್ಬರಿಗೂ ನೀಡಿರುವ ದೇಹವನ್ನು ಸರಿಯಾದ ಕ್ರಮಗಳು, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಕಾಪಾಡಿಕೊಂಡಾಗ ಮಾತ್ರ ‘ಆರೋಗ್ಯವೇ ಭಾಗ್ಯ’ ಎಂಬ ನುಡಿ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಕೆ. ಭೀಮನಗೌಡ ವಕೀಲರು
ದಿನದ 24 ಗಂಟೆಗಳನ್ನು ಸರಿಯಾಗಿ ಮೂರು ಭಾಗಗಳಾಗಿ ಹಂಚಿಕೊಂಡು – ಕೆಲಸ, ವಿಶ್ರಾಂತಿ ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಶ್ರೀ ವಿಜಯಚಂದ್ರ ಪ್ರಭು ಬಿ, ಸಹಾಯಕ ಸರಕಾರಿ ಅಭಿಯೋಜಕರು, ಆರೋಗ್ಯ ಕಾರ್ಯಕರ್ತರ ಹಕ್ಕು–ರಕ್ಷಣೆ ಹಾಗೂ ಕಾನೂನು ಪ್ರೋವಿಷನ್ಸ್ ಕುರಿತು ಮಾಹಿತಿ ನೀಡಿ, ಗುಣಮಟ್ಟದ ಸಾರ್ವಜನಿಕ ಆರೋಗ್ಯ ಸೇವೆಯನ್ನು ನಿಷ್ಠೆಯಿಂದ ಒದಗಿಸುವ ಅಗತ್ಯವನ್ನು ವಿವರಿಸಿದರು. ಶ್ರೀ ಶೇಖರಪ್ಪ ಗಡೆದ್, ಖಜಾಂಚಿ – ತಾಲೂಕು ನ್ಯಾಯವಾದಿಗಳ ಸಂಘ, ಇವರು ಮಾತನಾಡಿ “ಸಾಲವಿಲ್ಲದವನೂ, ಆರೋಗ್ಯವಂತನೂ ಆದವನೇ ನಿಜವಾದ ಶ್ರೀಮಂತ” ಎಂದು ಆರೋಗ್ಯದ ಮಹತ್ವವನ್ನು ಒತ್ತಿಹೇಳಿದರು,ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಶ್ರೀಮತಿ ಗೀತಾ ಹಿರೇಮಠ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ, ತಾಯಿ–ಮಗು ಆರೋಗ್ಯ, ನವಜಾತ ಶಿಶು ಆರೋಗ್ಯ, ಲಸಿಕಾ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನೆ, ಇಂದ್ರಧನುಷ್, ಬಾಯಿ ಆರೋಗ್ಯ ಸೇರಿದಂತೆ ಅನೇಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಪ್ರಬೋಧನಾತ್ಮಕ ಉಪನ್ಯಾಸ ನೀಡಿ ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಿದರು, ಕಾರ್ಯಕ್ರಮದಲ್ಲಿ ಶ್ರೀ ಲಾಜರ್ ಸಿರಿಲ್ ಜಿ, ನರ್ಸಿಂಗ್ ಪ್ರಾಚಾರ್ಯರು, ಆರೋಗ್ಯ–ಸರ್ಕಾರಿ ಯೋಜನೆಗಳಾದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಅನೀಮಿಯಾ ಮುಕ್ತ ಭಾರತ, ಆರ್.ಬಿ.ಎಸ್.ಕೆ, ಜೆ.ಎಸ್.ಎಸ್.ವೈ, ಪಿ.ಎಂ.ಎಂ.ಎಸ್.ವೈ, ಕಾಯಕಲ್ಪ, ಲಕ್ಷ್ಯ ಹಾಗೂ ಸಾಂಕ್ರಾಮಿಕ–ಅಸಾಂಕ್ರಾಮಿಕ ರೋಗ ತಡೆ ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.ಕಾರ್ಯಕ್ರಮದ ಕುರಿತು ತಯಾರಿಸಲಾದ ಆರೋಗ್ಯ ಜಾಗೃತಿ ಫಲಕ ಮತ್ತು ರಂಗೋಲಿಗಳನ್ನು ಪ್ರಧಾನ ನ್ಯಾಯಾಧೀಶರು, ಕಾರ್ಯಕ್ರಮದ ಅಧ್ಯಕ್ಷರಾದ ಭೀಮನಗೌಡರು ಹಾಗೂ ಎಲ್ಲಾ ಗಣ್ಯರು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ
* ಸನ್ಮಾನ್ಯ ನ್ಯಾಯಾಧೀಶರು ಶ್ರೀಮತಿ ರೂಪ
* ಶ್ರೀ ಕೆ. ಭೀಮನಗೌಡ – ಅಧ್ಯಕ್ಷ, ತಾಲೂಕು ನ್ಯಾಯವಾದಿಗಳ ಸಂಘ
* ಹಿರಿಯ ವಕೀಲರು ಶ್ರೀ ಖಾಜಿ ಮಲಿಕ್
* ಸಹಾಯಕ ಸರಕಾರಿ ಅಭಿಯೋಜಕರು ಶ್ರೀ ವಿಜಯಚಂದ್ರ ಪ್ರಭು ಬಿ
* ಖಜಾಂಚಿ ಶ್ರೀ ಶೇಖರಪ್ಪ ಗಡೆದ್ ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು
* ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಗೀತಾ ಹಿರೇಮಠ
* ಸನ್‌ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಕಾರ್ಯದರ್ಶಿ ಇರ್ಷಾದ್ ಕೆ. ಅತ್ತಾರ್
* ಆಡಳಿತ ಮಂಡಳಿ ಸದಸ್ಯ ಆಸಿಫ್
* ಪ್ರಾಚಾರ್ಯರಾದ ಚಕ್ರವರ್ತಿ, ವಾಸಿಂ ಹುಸೇನ್
* ನರ್ಸಿಂಗ್ ಪ್ರಾಚಾರ್ಯ ಲಾಜರ್ ಸಿರಿಲ್
* ಉಪನ್ಯಾಸಕರು: ಆಶು ಪಾಷ, ರಾಜೇಶ್, ವೀರೇಶ್, ಕುಮಾರಿ ಶೋಭಾ, ಕುಮಾರಿ ವೀರೇಶ್ವರಿ, ಶ್ರೀಮತಿ ರಾಧಿಕಾ, ಕುಮಾರಿ ಚೈತ್ರ,ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *