ತಾಳಿಕೋಟಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು 2024-25 ನೇ ಶೈಕ್ಷಣಿಕ ಸಾಲಿನ ಬಿ.ಈಡಿ 2ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿದ್ದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ 97.95 ರಷ್ಟು ಫಲಿತಾಂಶ ಬಂದಿದೆ. ಎರಡನೇ ಸೆಮಿಸ್ಟರ್ ದಲ್ಲಿ ವಿದ್ಯಾರ್ಥಿನಿ ಐಶ್ವರ್ಯ ದೊಡಮನಿ 84.50 (507/600) ಪ್ರಥಮ ಸ್ಥಾನ. ಅನ್ನಪೂರ್ಣ ಬಡಿಗೇರ 84.33 (506/600) ದ್ವಿತೀಯ ಸ್ಥಾನ. ಕೀರ್ತಿ ಹಂದ್ರಾಳ 83.83(503/600) ತೃತಿಯ ಸ್ಥಾನ ಪಡೆದುಕೊಂಡಿದ್ದಾಳೆ. ಅಭಿನಂದನೆ: ತಮ್ಮ ಸಂಸ್ಥೆಯ ಈ ಮೂವರು ಪ್ರಶಿಕ್ಷಣಾರ್ಥಿಗಳು ಎರಡನೇ ಸೆಮಿಸ್ಟರ್ ದಲ್ಲಿ ಮಾಡಿದ ಉತ್ತಮ ಸಾಧನೆಗಾಗಿ ವಿ.ವಿ.ಸಂಘದ ಚೇರ್ಮನ್ನರು, ಕಾರ್ಯಕಾರಿಣಿ ಸದಸ್ಯರು , ಬಿಈಡಿ ಕಾಲೇಜ್ ಚೆರ್ಮನ್ನರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *