ಸಿಂಧನೂರು : ಡಿ 11 ಜಿಲ್ಲೆ ಕ.ಸಾ.ಪ ರಾಯಚೂರು
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂಧನೂರು
೨೦೨೫-೨೬ ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆ
ದಿ.ಆನಂದ ಹೆಗಡೆ ಸಿಂಧನೂರು
ದಿ.ಬಸಪ್ಪ ನಾಗಪ್ಪ ತುಕ್ಕಾಯಿ ಸಿಂಧನೂರು ಇವರ ಹಾಗೂ ಶರಣ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಕರಾದ ಶ್ರೀ ಶೇಖರಯ್ಯ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಿಂಧನೂರು ಇವರು ಉದ್ಘಾಟಿಸಿದರು ಈ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಎಫ್. ಮಸ್ಕಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಸಿಂಧನೂರು ವಹಿಸಿದ್ದರು .ನಂತರ ಮಾತನಾಡಿದ
ಇವರು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಬಿಟ್ಟು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು ಉನ್ನತ ಮಟ್ಟದ ಕನಸುಗಳು ಕಾಣಬೇಕು, ಕಲಿಕಾರ್ಥಿಗಳ ಮನಸ್ಸು ಬಿಳಿ ಹಾಳೆಯಂತೆ ಅದರಲ್ಲಿ ಸುಜ್ಞಾನ, ಸು ಸಂಸ್ಕೃತಿಯ ಬೆಳಕಿನ ಜ್ಞಾನ ಹಚ್ಚಬೇಕು ಎಂದು ತಿಳಿಸಿದರು.
ನಂತರ ಶ್ರೀ ಶೇಖರಯ್ಯ ಉದ್ಘಾಟನಾ ನುಡಿಯಲ್ಲಿ ಮಾತಾಡಿ ಶರಣ ಸಾಹಿತ್ಯದಲ್ಲಿ ದಾಸರು ಸಂತರು ಶ್ರೇಷ್ಠ ವಚನಗಾರರು ಕನ್ನಡ ಸಾಹಿತ್ಯ ರಚನೆಗಳಲ್ಲಿ ಅತ್ಯಮೂಲ್ಯವಾದ ಸಾಮಾಜಿಕ ಮಾನವೀಯ ಮೌಲ್ಯಗಳನ್ನು ಸಾರುವ ಅಂಶಗಳು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ತಿಳಿಹೇಳಿದರು. ನಂತರ
ಶರಣ ಸಾಹಿತ್ಯ ವಿಷಯ ಮಂಡನೆ ಕುರಿತು ಉಪನ್ಯಾಸ ನೀಡಿದ ಶ್ರೀ ಶರಣಪ್ಪ ಹೊಸಳ್ಳಿ ಇವರು ಮಕ್ಕಳಿಗೆ ಬೇಕಾದ ಶರಣರ ಸಾಹಿತ್ಯ ಜೀವನದ ಮೌಲ್ಯಗಳನ್ನು ಕಟ್ಟಿಕೊಡುತ್ತದೆ , ಮತ್ತು ಅದರ ಶರಣ ಸಾಹಿತ್ಯವು ಸಾಮಾಜಿಕ ಜೀವನ ಮೌಲ್ಯಯುತವಾಗಿ ಜೀವನವನ್ನು ಕಟ್ಟಿಕೊಡುತ್ತವೆ ಜೊತೆಗೆ ಅನೇಕ ಶರಣರ ವಚನಗಳು,ಚಿಂತನೆ, ಸದ್ದವಿಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ನಂತರ ಹೆಚ್.ಎಂ.ಶ್ರೀಶೈಲ ಉಪನ್ಯಾಸಕರು ರವರು ವೇದಿಕೆಗೆ ಮುಖ್ಯ ಅತಿಥಿಗಳಿಗೆ ಸ್ವಾಗತಿಸಿ ಪುಷ್ಪಗುಚ್ಛ ಮತ್ತು ಹೆಗಲಪಟ್ಟಿ ಹಾಕುವುದರ ಮೂಲಕ ಶ್ರೀ ಕೆ.ಆನಂದ ಹೆಗಡೆ ಸಿಂಧನೂರು
ಶ್ರೀಮತಿ ಪಾರ್ವತಮ್ಮ ಬಸಪ್ಪ ತುಕ್ಕಾಯಿ ಸಿಂಧನೂರು
ದತ್ತಿದಾನಿಗಳ ಪರಿಚಯ ಮಾಡಿದರು. ಈ ಶರಣ ಸಾಹಿತ್ಯ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಮಾತನಾಡಿ
ಶ್ರೀ ನಿರುಪಾದೆಪ್ಪ ಹಿರಿಯ ವಕೀಲರು ಗುಡಿಹಾಳ ಅವರು ಹೆಣ್ಣಿನ ಸ್ಥಾನಮಾನಗಳು ಶರಣ ಸಾಹಿತ್ಯ ಕಾಲದಲ್ಲಿ ಉನ್ನತ ಮಟ್ಟದಲ್ಲಿ 12ನೇ ಶತಮಾನದಲ್ಲಿ ಗೌರವಿಸಲಾಗುತ್ತಿತ್ತು , ಕಲಿಯುಗದ ಈ ಕಾಲದಲ್ಲಿ ಹೆಣ್ಣನ್ನು ದ್ವಿತೀಯ ದರ್ಜೆ ಸ್ಥಾನದಲ್ಲಿ ಕಾಣುವುದು ವಿಪರ್ಯಾಸದ ಸಂಗತಿ ಸಮಾನವಾದ ಸ್ಥಾನಮಾನಗಳನ್ನು ನೀಡಿ ಹೆಣ್ಣನ್ನು ಗೌರವಿಸಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ
ಶ್ರೀ ಶಿವಬಸವನಗೌಡ ಮಾಜಿ ನಗರಸಭೆ ಸಿಂಧನೂರು
ಶ್ರೀ ಅಂಬರೀಶ್ ಮಿಟ್ಟಿಮನಿ ಪ್ರಥಮ ದರ್ಜೆ ಗುತ್ತಿಗೆದಾರರು
ಶ್ರೀ ನಾಗರಾಜ್ ಬೊಮ್ಮನಾಳ ಪ್ರಧಾನ ಸಂಪಾದಕರು ಪ್ರಜಾ ಸೇನೆ ಸಿಂಧನೂರು
ಶ್ರೀ ಹುಡಸಪ್ಪ ಹುಡುಸೂರು ಉಪನ್ಯಾಸಕರು
ಶ್ರೀ ಸಿದ್ದನಗೌಡ ಉಪನ್ಯಾಸಕರು
ಶ್ರೀ ಬಸವರಾಜ್ ಯಲಬುರ್ಗಾ ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವಂದನಾರ್ಪಣೆಯನ್ನು ಶಾಂತಾ ಒಳಗಿನಮನಿ ಅವರು ವಂದಿಸಿದರು.


