ತಾಳಿಕೋಟೆ: ಪಟ್ಟಣದ ಪಟ್ಟಣದ ಪುರಾತನ ಮಠವಾದ ಅಗ್ನಿ ಚರಮೂರ್ತಿ ( ಚರಂತಿಮಠ) ಕಾರ್ತಿಕ ಮಹೋತ್ಸವವು ಭಕ್ತಿ,ಶ್ರದ್ಧೆ, ಸಂಭ್ರಮ ಸಡಗರದಿ ಜರುಗಿತು.
ಶಾಂತವೀರ ಮಹಾಸ್ವಾಮಿ ಚರಂತಿಮಠದ ಕಾರ್ತಿಕೋತ್ಸವ ಕಾರ್ಯಕ್ರಮವು ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ಜರುಗಿತು. ಕಾರ್ತಿಕೋತ್ಸವ ನಿಮಿತ್ತ ಬೆಳಿಗ್ಗೆ ಕರ್ತೃ ಗದ್ದುಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಿ ಅರ್ಚಕ ಜಗದೀಶ್ ಹಿರೇಮಠ್ ಇವರು ಪೂಜಾ ಕಾರ್ಯ ನೆರವೇರಿಸಿದರು.
ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಾಯಂಕಾಲ ಕಾರ್ತಿಕ ಇಳಿಸುವ ಕಾರ್ಯಕ್ರಮವು ಜರುಗಿತು.
ಈ ಸಂದರ್ಭದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಬ್ರಹ್ಮ ಶಿವಯೋಗಿ ಶಿವಾಚಾರ್ಯರು ಚರಂತಿಮಠ ತಾಳಿಕೋಟೆ- ಅಣದೂರ ಅವರು, ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಹೆಚ್ಚು ಫಲಪ್ರದವಾಗುತ್ತದೆ. ಈ ತಿಂಗಳು ದೀಪದಾನ ತುಳಸಿ ಪೂಜೆ, ಶಿವ- ವಿಷ್ಣು-ಪೂಜೆ ಮಾಡುವುದರಿಂದ ಅಂಧಕಾರ ತೊಲಗಿ ಜ್ಞಾನ, ಆರೋಗ್ಯ, ಸುಖ-ಶಾಂತಿ ಮತ್ತು ಮೋಕ್ಷದ ಮಾರ್ಗ ದೊರೆಯುತ್ತದೆ ಎಂದರು.
ಉತ್ಸವದಲ್ಲಿ ಸಂಗಯ್ಯ ಚರಂತಿಮಠ, ಸುಭಾಸ್ ಅಲ್ಲಾಪೂರ, ಪವಾಡೆಯ್ಯ ಚರಂತಿಮಠ, ಪರಮಯ್ಯ ಹಿರೇಮಠ, ಶ್ರೀಶೈಲ ವಿಭೂತಿ, ವಿರುಪಾಕ್ಷಿಗೌಡ ಪಾಟೀಲ, ಶಾಂತಗೌಡ ದೇಸಾಯಿ, ಶರಣು ಪಾಲ್ಕಿ , ರಾಜು ಅಲ್ಲಾಪೂರ, ಗುರುನಾಥಗೌಡ ಮಸ್ಕಾನಾಳ, ದೀಪು ಚರಂತಿಮಠ, ಶರಣು ಬಿಳೇಭಾವಿ, ಖಾಸ್ಗತೇಶ್ವರ ಸೊಸೖಯಿಟಿಯ ಸಿಬ್ಬಂದಿ ವರ್ಗ ಹಾಗೂ ಮಹಿಳೆಯರು ಮಕ್ಕಳು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ತಾಳಿಕೋಟೆ: ಪಟ್ಟಣದ ಪಟ್ಟಣದ ಪುರಾತನ ಮಠವಾದ ಅಗ್ನಿ ಚರಮೂರ್ತಿ ( ಚರಂತಿಮಠ) ಕಾರ್ತಿಕ ಮಹೋತ್ಸವಕ್ಕೆ ಮಠದ ಶ್ರೀಗಳು ದೀಪ ಬೆಳಗಿ ಚಾಲನೆ ನೀಡಿದರು.

Leave a Reply

Your email address will not be published. Required fields are marked *