ಲಿಂಗಸಗೂರು : ಡಿ 12.
ಪಟ್ಟಣದಲ್ಲಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಉಪ ನಿರ್ದೇಶಕ ಕಛೇರಿ-2 ಸಿಂಧನೂರಿಗೆ ಸ್ಥಳಾಂತರಿಸುವ ಆದೇಶವನ್ನು ಕೂಡಲೆ ರದ್ದುಪಡಿಸಬೇಕೆಂದು ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಬೆಳಗಾವಿಯ ವಿಧಾನಸಭಾ ಅಧಿವೇಶನದ ಪ್ರಶೋತ್ತರ ಕಲಾಪದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಒತ್ತಾಯಿಸಿದರು.

ಶಾಸಕ ಮಾನಪ್ಪ ವಜ್ಜಲ್ ಕೃಷಿ ಇಲಾಖೆ ಸಚಿವರೊಡನೆ ಚರ್ಚಿಸುವಾಗ ಯಾವುದೇ ಕಾರಣಕ್ಕೂ ಉಪ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೆ ಬಿಡುವುದಿಲ್ಲ. ಈ ಕಛೇರಿ ಲಿಂಗಸಗೂರಿನಲ್ಲಿಯೇ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರೈತರಿಗೆ ಅನುಕೂಲವಾಗಿದೆ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಇತರೆ ಸಂಘ ಸಂಸ್ಥೆಗಳ ಕಾರ್ಯಕರ್ತರು ಧರಣಿ ಉಪವಾಸ ಸತ್ಯಗ್ರಹ ನಡೆಸಿದ್ದು, ಸ್ಥಳಾಂತರ ಆದೇಶ ರದ್ದುಪಡಿಸದಿದ್ದರೆ ನಾವು ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗುತ್ತದೆ ಕಾನೂನು ಸುವ್ಯವಸ್ಥೆ ಕೈ ಮೀರಿ ಹೋದಾಗ ಇದಕ್ಕೆ
ಸರಕಾರವೇ ಜವಾಬ್ದಾರಿ ಆಗುತ್ತದೆ ಎಂದು ಹೇಳಿದರು .

ಸರಕಾರ ಲಿಂಗಸಗೂರು ಮತ ಕ್ಷೇತ್ರವನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದೆ, ಈ ಮೊದಲು ಲಿಂಗಸಗೂರಿಗೆ ಮಂಜೂರಾದ 200 ಹಾಸಿಗೆ ಜಿಲ್ಲಾಸ್ಪತ್ರೆ ಸ್ಥಳಾಂತರಿಸಲಾಯಿತು. ಈಗ ಕೃಷಿ ಕಛೇರಿ ಸ್ಥಳಾಂತರ ನಡೆಸುವ ಹುನ್ನಾರ ನಡೆದಿದ್ದು ಹಾಗೂ ಇತರೆ ಕಛೇರಿ ಸ್ಥಳಾಂತರಕ್ಕೆ ಪ್ರಯತ್ನ ನಡೆಸಿದ್ದು, ನಾವು ಯಾವುದೆ ಕಾರಣಕ್ಕೂ ಸ್ಥಳಾಂತರಕ್ಕೆ ಒಪ್ಪುವುದಿಲ್ಲ. ಸ್ಥಳಾಂತರಕ್ಕೆ ಸರಕಾರ ತಡೆ ನೀಡಿದರು ಮೂಲ ಆದೇಶ ರದ್ದಾಗಬೇಕು ಎಂದು ಒತ್ತಾಯಿಸಿದರು.

ಕೃಷಿ ಸಚಿವ ಎನ್ ಚಲವರಾಯ ಸ್ವಾಮಿ ಉತ್ತರಿಸಿ ಕೃಷಿ ಇಲಾಖೆ ಅಧಿಕಾರಿಗಳ ವರದಿ ಅನ್ವಯ ಕೃಷಿ ಉಪ ನಿರ್ದೇಶಕರ ಕಛೇರಿಯನ್ನು ಸ್ಥಳಾಂತರಕ್ಕೆ ಒಪ್ಪಲಾಗಿತ್ತು. ಆದರೆ, ಈಗ ಈ ಕಛೇರಿಯನ್ನು ಸ್ಥಳಾಂತರ ಮಾಡದಂತೆ ತಡೆಹಿಡಿಯಲಾಗಿದೆ. ಮುಂದಿನ ಕ್ರಮಕ್ಕಾಗಿ ಅಧಿಕಾರಿಗಳಿಂದ ಸಮಗ್ರ ವರದಿ ತರೆಸಿಕೊಂಡು ಆದೇಶ ರದ್ದಿನ ಬಗ್ಗೆ ವಿಚಾರ ಮಾಡಲಾಗುದೆಂದರು, ಈ ಕುರಿತು ಕೃಷಿ ಕಛೇರಿ ಸ್ಥಳಾಂತರ ವಿರೋಧಿಸಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹಾಗೂ ಇತರರು ಮನವಿ ಸಲ್ಲಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ .

Leave a Reply

Your email address will not be published. Required fields are marked *